ಮೈಸೂರು

ವಿಷ ಸೇವಿಸಿ ರೈತ ಮಹಿಳೆ ಆತ್ಮಹತ್ಯೆ

ಮೈಸೂರು,ಜು.8:-ರೈತಮಹಿಳೆಯೋರ್ವರು  ಆತ್ಮಹತ್ಯೆಗೆ ಶರಣಾದ ಘಟನೆ  ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾರಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ನಿಂಗಮ್ಮ(63) ಎಂದು ಗುರುತಿಸಲಾಗಿದೆ.ತನ್ನ ಜಮೀನಿನಲ್ಲಿಯೇ ವಿಷ  ಸೇವಿಸಿದ್ದರು.ಮೂರು ಎಕ್ಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ವಿಷ ಕುಡಿದು ಜಮೀನಿನಲ್ಲಿ ಒದ್ದಾಡುವಾಗ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸಮಾಡುತ್ತಿದ್ದವರು ರಕ್ಷಿಸಿ, ಮೈಸೂರಿನ ಕೆ.ಆರ್. ಆಸ್ಪತ್ರೆಗೆ  ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬೀಚನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: