ಸುದ್ದಿ ಸಂಕ್ಷಿಪ್ತ

ಹರಿದಾಸ ವೈಭವ ಭಕ್ತಿಸಂಗೀತ ಕಾರ್ಯಕ್ರಮ

ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯು ಸಿರಿ ಚಾನೆಲ್ ನ ಸಹಭಾಗಿತ್ವದೊಂದಿಗೆ ದಸರಾ ಹಬ್ಬದ ಪ್ರಯುಕ್ತ ‘ಹರಿದಾಸ ವೈಭವ’ ಎಂಬ ಭಕ್ತಿಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ  ಸಮಿತಿಯ ಕಾರ್ಯದರ್ಶಿ ಎಸ್. ರವಿಕುಮಾರ್ ಹೇಳಿದರು

ಈ ಕಾರ್ಯಕ್ರಮವು ಅ.16 ರ ಸಂಜೆ 5 ರಿಂದ 8.30 ರವರೆಗೆ  ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ  ನಡೆಯಲಿದೆ. ಪ್ರಖ್ಯಾತ ಗಾಯಕರಾದ ವಿದ್ವಾನ್ ರಾಯಚೂರು ಶೇಷಗಿರಿದಾಸ್, ಬೆಂಗಳೂರಿನ ವಿದೂಷಿ ಸಂಗೀತಾ ಬಾಲಚಂದ್ರ ಉಡುಪಿ, ವಿದೂಷಿ ಸಂಗೀತಾ ಕಾಖಂಡಕಿ ಬೆಂಗಳೂರು ಇವರು ಒಂದೇ ವೇದಿಕೆಯನ್ನು ಅಲಂಕರಿಸಿ ವಿಶಿಷ್ಟ ಶೈಲಿಯಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಂಜೆ 5 ರಿಂದ 5.30 ಕ್ಕೆ ಭಜನಾ ಮಂಡಳಿಯಿಂದ ಭಜನ ಕಾರ್ಯಕ್ರಮ, 5.30 ರಿಂದ 6 ಗಂಟೆಯವರೆಗೆ ವಿದ್ವಾನ್ ಗುರುಪ್ರಸಾದಚಾರ್ಯ ಅವರಿಂದ ‘ನವರಾತ್ರಿ ಹಬ್ಬದ’ ಬಗ್ಗೆ ವಿಶೇಷ ಉಪನ್ಯಾಸವಿರುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಎಸ್.ವೆಂಕಟೇಶ್ ರಾವ್, ಖಜಾಂಚಿ ಜಯಶ್ರೀ ಉಪಸ್ಥಿತರಿದ್ದರು.

 

Leave a Reply

comments

Related Articles

Check Also

Close
error: