ಸುದ್ದಿ ಸಂಕ್ಷಿಪ್ತ

ರೆಗ್ಯುಲರ್ ಕೋರ್ಸ್ ಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಹಂಪಿ, ಜು.8: ಕನ್ನಡ ವಿಶ್ವವಿದ್ಯಾನಿಲಯವು  2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರೆಗ್ಯುಲರ್ ಕೋರ್ಸ್ ಗಳ  ಪ್ರವೇಶಾತಿಗಾಗಿ  ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹಂಪಿಯ ವಿದ್ಯಾರಣ್ಯ ಆವರಣ ಮತ್ತು ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರಗಳಾದ ಕುಪ್ಪಳ್ಳಿ, ರಾಯಚೂರು ಜಿಲ್ಲೆಯ ದೇವದುರ್ಗಗಳಲ್ಲಿ ಅಧ್ಯಯನ ಮಾಡಬಹುದಾದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವವರು ಜುಲೈ 19 ರೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ: 08394- 241337, 241464, 241335  ಫ್ಯಾಕ್ಸ್:  (08394) 241334, 241335, ಇ-ಮೇಲ್ : [email protected] ಗೆ ಸಂಪರ್ಕಿಸಬಹುದಾಗಿದೆ. (ವರದಿ: ಎಲ್.ಜಿ)

Leave a Reply

comments

Related Articles

error: