ಪ್ರಮುಖ ಸುದ್ದಿಮೈಸೂರು

70 ವರ್ಷಗಳಿಂದ ಪಾಳುಬಿದ್ದಿದ್ದ ಕೃಷ್ಣ ದೇಗುಲಕ್ಕೆ ಕಾಯಕಲ್ಪ

temple-3 ಮೈಸೂರನ್ನು ಸಾಂಸ್ಕೃತಿಕ ನಗರಿ ಅಂತ ಕರೆಯುತ್ತೇವೆ. ಮೈಸೂರಿನ ಪಕ್ಕದಲ್ಲಿರುವ ನಂಜನಗೂಡನ್ನೂ ದಕ್ಷಿಣ ಕಾಶಿಗೆ ಹೋಲಿಸುತ್ತೇವೆ. ಈ ದಕ್ಷಿಣ ಕಾಶಿಯಲ್ಲಿ ದೇಗುಲಗಳೇನು ಕಡಿಮೆ ಇಲ್ಲ. ಆದರೆ ಇಲ್ಲೊಂದು ದೇಗುಲವು ಕಳೆದ 7೦ ವರ್ಷಗಳಿಂದ ಪೂಜೆ ಪುನಸ್ಕಾರವಿಲ್ಲದೆ ಸೊರಗಿ ಹೋಗಿತ್ತು.ದೇವಾಲಯದ ಕಟ್ಟಡ ಶಿಥಿಲಗೊಂಡಿದ್ದರೂ, ಅದನ್ನು ಸಂರಕ್ಷಿಸುವ ಪ್ರಯತ್ನಕ್ಕೆ ಯಾರೂ ಕೈಹಾಕಿರಲಿಲ್ಲ. ಆದರೆ, ಇದೀಗ ಇಲ್ಲಿನ ಸ್ಥಳೀಯ ಯುವಕರ ತಂಡವೊಂದು ಈ ದೇಗುಲಕ್ಕೆ ಕಾಯಕಲ್ಪ ಕಲ್ಪಿಸಿ ದೇಗುಲಕ್ಕೆ ಹೊಸ ಹೆಸರನ್ನು ಕೂಡ ನಾಮಕರಣ ಮಾಡಿದ್ದಾರೆ.

ಹೌದು, ನಂಜನಗೂಡಿನ ಸಮೀಪವಿರುವ ಕತ್ವಾಡಿಪುರ ಎಂಬ ಗ್ರಾಮದಲ್ಲಿ ವೇಣುಗೋಪಾಲ ಸ್ವಾಮಿ ದೇಗುಲವಿತ್ತು. 70 ವರ್ಷಗಳಿಂದ ಈ ದೇಗುಲದಲ್ಲಿ ಪೂಜೆಯಿಲ್ಲದೇ, ಗಿಡಗಂಟೆಗಳಿಂದ ತುಂಬಿಹೋಗಿ ದೇವಾಲಯವೇ ಕುಸಿದು temple-2ಬೀಳುವ ಸ್ಥಿತಿಯಲ್ಲಿತ್ತು. ಇದನ್ನ ಗಮನಿಸಿದ ನಂಜನಗೂಡಿನ ಯುವ ಬ್ರೀಗೇಡ್ ತಂಡ ದೇಗುಲದಲ್ಲಿನ ಗಿಡಗಂಟೆ ತೆಗೆದು ಸತತ ಮೂರು ತಿಂಗಳ ಕಾಲ ದೇಗುಲವನ್ನು ಶುಚಿಗೊಳಿಸಿ, ಬಣ್ಣ ಬಳಿದು ಇದಕ್ಕೆ ಪತಿತಾ ಪಾವನ ವೇಣುಗೋಪಾಲ ಸ್ವಾಮಿ ದೇಗುಲ ಎಂದು ನಾಮಕರಣ ಮಾಡಿದ್ದಾರೆ. ಅಲ್ಲದೆ, ಯುವಕರು ಮಾಡುತ್ತಿದ್ದ ಕೆಲಸ ಕಂಡು ಸ್ಥಳೀಯ ಮುಖಂಡರು ಹಾಗೂ ಕತ್ವಾಡಿಪುರದ ಗ್ರಾಮದ ಜನರು ಸಹ ಕೈಜೋಡಿಸಿದರು. ಇದರಿಂದ ದೇಗುಲ ಪುನರ್ ನಿರ್ಮಾಣಗೊಂಡು ನಿತ್ಯವೂ ಪೂಜೆ ಪುನಸ್ಕಾರದಿಂದ ಕಂಗೊಳಿಸುತ್ತಿದೆ. ಮಾತ್ರವಲ್ಲದೇ ಇದನ್ನು ಯುವಬ್ರೀಗೇಡ್ ನ ರಾಷ್ಟ್ರ ನಾಯಕ ಚಕ್ರವರ್ತಿ ಸೂಲಿಬೆಲೆಯವರ ಉಪಸ್ಥಿತಿಯಲ್ಲಿ ಉದ್ಘಾಟನೆ ಸಹ ಮಾಡಲಾಯಿತು.

ವಿಶೇಷ: ದೇಗುಲಕ್ಕೆ ಈ ಮೊದಲು ಅಂದರೆ 70 ವರ್ಷದ ಹಿಂದೆ ದಲಿತರಿಗೆ ಪ್ರವೇಶ ನಿರಾಕರಿಸಿದ್ದರು. ಆದರೆ ಇದೀಗ ಯುವ ಬ್ರೀಗೇಡ್ ನ ತಂಡದಿಂದ ಶ್ರಮದಿಂದ ಈ ಸಮಸ್ಯೆಯೂ ತೊಲಗಿ, ಎಲ್ಲರಿಗೂ ದೇಗುಲದ ಪ್ರವೇಶ ನೀಡಲಾಗಿದೆ. ಅಲ್ಲದೇ ಇದು ನಂಜನಗೂಡು ಮಾತ್ರವಲ್ಲ ರಾಜ್ಯವ್ಯಾಪಿ ಈ ಕೆಲಸ ಕೈಗೆತ್ತಿಕೊಂಡಿದ್ದು, ಇದೊಂದು ಮಹತ್ಕಾರ್ಯ ಎಂದು ನಂಜನಗೂಡು ಯುವಬ್ರೀಗೇಡ್ ನ ಸಂಚಾಲಕ ಚಂದ್ರಶೇಖರ್ ಹೇಳಿದ್ದಾರೆ.

ಸುರೇಶ್ ಎನ್.

temple-4

Leave a Reply

comments

Related Articles

error: