ದೇಶಪ್ರಮುಖ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಕೋಮುಗಲಭೆ : ಬಿಜೆಪಿ ನಾಯಕಿಯನ್ನು ಬಂಧಿಸಿದ ಪೊಲೀಸರು

ಕೋಲ್ಕತ್ತಾ, ಜುಲೈ 8 : ಫೇಸ್‍ಬುಕ್‍ನಲ್ಲಿ ಧಾರ್ಮಿಕ ನಿಂದನೆ ಮಾಡಿ ಹಾಕಿದ್ದರೆನ್ನಲಾದ ಪೋಸ್ಟ್ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಕೋಮು ಗಲಭೆ ಸಂಭವಿಸಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ವಾರದಿಂದಲೂ ಹೊತ್ತಿ ಉರಿಯುತ್ತಿದ್ದ ಗಲಭೆಪೀಡಿತ ಪ್ರದೇಶದಲ್ಲಿ ಇತ್ತೀಚೆಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ ಬೂದಿ ಮುಚ್ಚಿದ ಕೆಂಡದಂತಾಗಿರುವ ಗಲಭೆ ಪೀಡಿತ ಪ್ರದೇಶಕ್ಕೆ ತೆರಳುತ್ತಿದ್ದ ಬಿಜೆಪಿ ನಾಯಕಿ ರೂಪ ಗಂಗೂಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೋಮುಗಲಭೆ ಕುರಿತು ಪರಿಸ್ಥಿತಿ ವೀಕ್ಷಿಸಲು ರೂಪಾ ಗಂಗೂಲಿ ಅವರು ಬದುರಿಯಾಗೆ ತೆರಳದಂತೆ ಬಿಜೆಪಿ, ಎಡ ಪಕ್ಷಗಳು ಮತ್ತು ಕಾಂಗ್ರೆಸ್ ನಾಯಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಿದ್ದರೂ ಇಂತಹ ಸೂಕ್ಷ್ಮ ಸ್ಥಳಕ್ಕೆ ನೀಡಲು ಪರಿಸ್ಥಿತಿಯಲ್ಲಿ ನಟಿ ಮತ್ತು ರಾಜಕಾರಣಿಯಾಗಿರುವ ರೂಪಾ ಅವರು ತೆರಳುತ್ತಿದ್ದ ಸಂದರಭ ಅವರನ್ನು ಪೊಲೀಸರು ಬಂಧಿಸುವ ಮೂಲಕ ತಡೆದಿದ್ದಾರೆ. ಇವರ ಜೊತೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನೂ ಬಂಧಿಸಲಾಗಿದೆ.

ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನವಾಗುವವರೆಗೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: