ಮೈಸೂರು

ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಪಾಠ ಮಾಡಿದ ಇನ್ಸಪೆಕ್ಟರ್

ಮೈಸೂರು,ಜು.8:- ನಗರದ ದೇವರಾಜ ಸಂಚಾರಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಕುರಿತು ಪಾಠ ಮಾಡಿದರು.

ದೇವರಾಜ ಸಂಚಾರಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂದೇಶ್ ವಿದ್ಯಾರ್ಥಿಗಳಿಗೆ ರಸ್ತೆಯ ನಿಯಮ ಹಾಗೂ ಸಂಚಾರಿ ನಿಯಮಗಳ ಕುರಿತು ತಿಳಿಸಿದರು. ರಸ್ತೆ ದಾಟುವಾಗ ಹೇಗೆ ದಾಟಬೇಕು, ಸೈಕಲ್ ನಲ್ಲಿ ಸಂಚರಿಸುವವರು ಯಾವ ರೀತಿ ನಿಯಮಗಳನ್ನು ಪಾಲಿಸಬೇಕು ಹಾಗೂ ವಾಹನ ಚಾಲನೆ ಮಾಡುವವರು ಯಾವ ರೀತಿಯ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿಸಿದರು. ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ಕಿವಿಗೊಟ್ಟು ಆಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: