ದೇಶಪ್ರಮುಖ ಸುದ್ದಿ

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ: ಆರೋಪಿ ಖಾದಿರ್ ಅಹ್ಮದ್ ಬಂಧನ

ಪ್ರಮುಖ ಸುದ್ದಿ,ಲಖನೌ, ಜು.8 : 1993 ರ ಮುಂಬೈ ಸರಣಿ ಬಾಂಬ್  ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ಎಂಬಾತನನ್ನು ಗುಜರಾತ್, ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉತ್ತರ ಪ್ರದೇಶದ ನಜಿಬಾಬಾದ್ ನಲ್ಲಿ ಟಾಡಾ ಪ್ರಕರಣದ ಆರೋಪಿ ಖಾದಿರ್ ಅಹ್ಮದ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಖಾದಿರ್ ಅಹ್ಮದ್ ಇರುವಿಕೆ ಕುರಿತು ಖಚಿತ ಮಾಹಿತಿ ಪಡೆದಿದ್ದ ಗುಜರಾತ್ ಎಟಿಎಸ್ ಅಧಿಕಾರಿಗಳು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳ ನೆರವು ಪಡೆದು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. (ವರದಿ: ಎಲ್.ಜಿ)

 

Leave a Reply

comments

Related Articles

error: