ಮನರಂಜನೆ

ನಟಿ ಶ್ರೀದೇವಿ ಬಗ್ಗೆ ನೀಡಿದ ಹೇಳಿಕೆಗೆ ವಿಷಾದವಿದೆ: ರಾಜಮೌಳಿ

ಮುಂಬೈ,ಜುಲೈ.8:  ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು ಮಾಡಿದ್ದು ಹಳೆಯ ಸಂಗತಿ. ಬಾಹುಬಲಿ ಚಿತ್ರ ಶಿವಗಾಮಿ ಪಾತ್ರದಲ್ಲಿ ಅಭಿನಯಿಸಲು ಅಭಿನೇತ್ರಿ ಶ್ರೀದೇವಿ ಆವರಿಗೆ ಆರಂಭದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು ಎಂದೆಲ್ಲ ಸುದ್ದಿಯಾಗಿತ್ತು. ನಂತರ ಆ ಪಾತ್ರವನ್ನು ನಟಿ ರಮ್ಯ ಕೃಷ್ಣ ಮಾಡಿದರು.

ಇದಕ್ಕೆ ನಟಿ ಶ್ರೀದೇವಿ ಪ್ರತಿಕ್ರಿಯೆ ನೀಡಿ, ರಾಜಮೌಳಿಯಂತಹ ಘನತೆವೆತ್ತ ನಿರ್ದೇಶಕರು ನನ್ನ ಬಗ್ಗೆ ಹೀಗೆ ಏಕೆ ಮಾತನಾಡಿದರು ಎಂದು ನನಗೆ ನಂಬಲಾಗುತ್ತಿಲ್ಲ. ನಾನು ಯಾವುದೇ ರೀತಿಯ ಬೇಡಿಕೆಯೊಡ್ಡುವ ನಟಿಯಲ್ಲ. ಬಾಹುಬಲಿಯಲ್ಲಿ ನಡೆದಿದ್ದೆಲ್ಲ ಕಳೆದುಹೋದದ್ದು. ಈಗ ಅದರ ಬಗ್ಗೆ ಏಕೆ ಮಾತನಾಡುವುದು, ಈ ಹಿಂದೆ ಸಾಕಷ್ಟು ಪಾತ್ರಗಳನ್ನು ನಾನು ತಿರಸ್ಕರಿಸಿದ್ದೆ. ಅವುಗಳಲ್ಲಿ ಇದು ಕೂಡ ಒಂದು. ನೀವು ಮಾಡದಿರುವ ಚಿತ್ರದ ಬಗ್ಗೆ ಮಾತನಾಡುವುದು ಅವಿಧೇಯತೆ ಎಂದು ಹೇಳಿದ್ದರು.

ಈ ವಿವಾದಕ್ಕೆ ಇದೀಗ ಇತಿಶ್ರೀ ಹಾಡಲು ನಿರ್ಧರಿಸಿರುವ ನಿರ್ದೇಶಕ ರಾಜಮೌಳಿ, ಯಾರ ಮಾತನ್ನು ನಂಬಬೇಕು ಎಂಬುದನ್ನು ಜನತೆ ನಿರ್ಧರಿಸಬೇಕು. ಆದರೆ ಒಂದು ವಿಷಯವಂತೂ ಸತ್ಯ. ನಾನು ಈ ವಿಚಾರವನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಬಾರದಾಗಿತ್ತು. ಅಂದು ನಾನು ಮಾಡಿರುವ ತಪ್ಪು. ನನಗೆ ಈ ಬಗ್ಗೆ ವಿಷಾದವಿದೆ . ನನಗೆ ಶ್ರೀದೇವಿಯರ ಬಗ್ಗೆ ಅಪಾರ ಗೌರವವಿದೆ. ಅವರಿಗೆ ನಾನು ಒಳ್ಳೆಯದನ್ನು ಬಯಸುತ್ತೇನೆ ಎಂದಿದ್ದಾರೆ.(ಪಿ.ಜೆ)

Leave a Reply

comments

Related Articles

error: