ಮೈಸೂರು

ಬೆಟ್ಟದಲ್ಲಿ ಎರಡು ಶುಕ್ರವಾರಗಳಲ್ಲಿಯೇ ದಾಖಲೆಯ ಗಳಿಕೆ

ಮೈಸೂರು,ಜು.8:- ವಿಶ್ವವಿಖ್ಯಾತ ಚಾಮುಂಡೇಶ್ವರಿ ಬೆಟ್ಟದಲ್ಲಿ ದಾಖಲೆ ಗಳಿಕೆಯಾಗಿದೆ. ಆಶಾಢ ಶುಕ್ರವಾರವಾದ ಕಾರಣ ಎರಡು ಶುಕ್ರವಾರಗಳಲ್ಲಿಯೇ 40 ಲಕ್ಷ ಸಂಗ್ರಹವಾಗಿದೆ.
ಕಳೆದ ಎರಡು ವರ್ಷಗಳಲ್ಲೇ  ದಾಖಲೆ ಹಣ ಸಂಗ್ರಹವಾಗಿದ್ದು, ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ  ಭಕ್ತ ಸಾಗರ ಹರಿದು ಬರುತ್ತಿದೆ. ಇನ್ನು ಎರಡು ಆಶಾಢ ಶುಕ್ರವಾರಗಳು ಬಾಕಿ ಇರುವಾಗಲೇ ಹುಂಡಿಯಲ್ಲಿ  40 ಲಕ್ಷ ಸಂಗ್ರಹವಾಗಿದೆ. 2015, 2016 ರ ನಾಲ್ಕು ಶುಕ್ರವಾರಗಳಿಗೆ ಹೋಲಿಸಿದರೆ ಈ ಭಾರಿ ದಾಖಲೆ ಗಳಿಕೆಯಾಗಿದೆ. 2015, ರ ಆಶಾಢ ಶುಕ್ರವಾರಗಳಲ್ಲಿ 29 ಲಕ್ಷದ 67 ಸಾವಿರ ಹಾಗೂ 2016 ರಲ್ಲಿ 38 ಲಕ್ಷದ 73 ಸಾವಿರ ಹಣ ಹುಂಡಿಗೆ ಬಿದ್ದಿತ್ತು.
ಈ ಭಾರಿ ಎರಡು ಶುಕ್ರವಾರಗಳಲ್ಲಿಯೇ ಬರೊಬ್ಬರಿ 40 ಲಕ್ಷದ 91 ಸಾವಿರ ಸಂಗ್ರಹವಾಗಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: