ಕರ್ನಾಟಕ

ಕೊಡಗು ಪ್ರೆಸ್‍ಕ್ಲಬ್‍ಗೆ 12 ಮಂದಿ ನಿರ್ದೇಶಕರ ಆಯ್ಕೆ

ರಾಜ್ಯ(ಮಡಿಕೇರಿ)ಜು.9 :- ಕೊಡಗು ಪ್ರೆಸ್‍ಕ್ಲಬ್ 2017-2020ನೇ ಸಾಲಿನ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.

ನಿರ್ದೇಶಕರಾಗಿ ರೆಜಿತ್ ಕುಮಾರ್(ವಿಶ್ವವಾಣಿ) 32, ಅಜ್ಜಮಾಡ ರಮೇಶ್ ಕುಟ್ಟಪ್ಪ(ವಿಜಯವಾಣಿ) 30, ವಿಘ್ನೇಶ್ ಎಂ. ಭೂತನಕಾಡು(ಕನ್ನಡಪ್ರಭ) 30, ಆರ್.ಸುಬ್ರಮಣಿ(ಸಂಯುಕ್ತ ಕರ್ನಾಟಕ) 29, ಕೆ.ಬಿ. ಮಂಜುನಾಥ್ (ಟಿವಿ9) 29, ಬಿ.ಜಿ. ಅನಂತಶಯನ(ಶಕ್ತಿ) 26, ಎಂ.ಎ. ಅಜೀಜ್(ವಿಜಯವಾಣಿ) 25, ಬಿ.ಎಸ್. ಲೋಕೇಶ್  ಸಾಗರ್(ವಿಜಯ ಕರ್ನಾಟಕ) 25, ಎನ್.ಎನ್. ದಿನೇಶ್(ಶಕ್ತಿ) 25, ಎಂ.ಪಿ. ಕೇಶವ ಕಾಮತ್(ಕೊಡಗು ಸಮಾಚಾರ) 24, ಬಿ.ಎನ್. ಮನುಶೆಣೈ(ಕೊಡಗು ಸಮಾಚಾರ) 24, ರಫೀಕ್ ತೂಚಮಕೇರಿ(ಶಕ್ತಿ) 24 ಮತ ಪಡೆದು ಆಯ್ಕೆಯಾಗಿದ್ದಾರೆ. ನಿರ್ದೇಶಕರ  ಸ್ಥಾನಕ್ಕೆ ಸ್ಪರ್ಧಿಸಿದ್ದ ಕಿಶೋರ್ ರೈ ಕತ್ತಲೆಕಾಡು(ದಿಗ್ವಿಜಯ  ನ್ಯೂಸ್) 23, ಕೆ. ತಿಮ್ಮಪ್ಪ (ಹೊಸದಿಗಂತ) 23, ಬಿ.ಎಸ್. ಸತ್ಯಮೂರ್ತಿ(ಕೊಡಗು ಧ್ವನಿ) 23, ಎಂ.ಎನ್. ನಾಸೀರ್(ಆಂದೋಲನ) 23, ತೇಜಸ್ ಪಾಪಯ್ಯ (ಎಎನ್‍ಐ) 22,  ಕಾಯಪಂಡ ಶಶಿ ಸೋಮಯ್ಯ (ಶಕ್ತಿ) 22, ಉಳ್ಳಿಯಡ ಎಂ.ಪೂವಯ್ಯ(ಬ್ರಹ್ಮಗಿರಿ) 21, ಶ್ರೀಧರ್ ನೆಲ್ಲಿತ್ತಾಯ (ಕೂರ್ಗ್ ಎಕ್ಸ್‍ಪ್ರೆಸ್) 21, ಕೆ.ಬಿ. ಮಹಂತೇಶ್ (ಮೈಸೂರು ಮಿತ್ರ) 19, ಗಣೇಶ್ ಕುಮಾರ್(ಕಾಫಿಲ್ಯಾಂಡ್ ನ್ಯೂಸ್) 17, ಕೆ.ಬಿ. ಶ್ರೀನಿವಾಸ್ (ಬ್ರಹ್ಮಗಿರಿ) 17 ಮತ ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 52 ಮತದಾರರ  ಪೈಕಿ 51 ಮಂದಿ ಮತದಾನ ಮಾಡಿದರು. ಈ ಪೈಕಿ 2 ಮತಗಳು ತಿರಸ್ಕೃತಗೊಂಡಿದೆ.  ಚುನಾವಣಾಧಿಕಾರಿಯಾಗಿ ನಿವೃತ್ತ ಉಪ ತಹಸೀಲ್ದಾರ್ ಕಾಳೇರಮ್ಮನ  ಬಿ. ರಾಘವಯ್ಯ ಕಾರ್ಯನಿರ್ವಹಿಸಿದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: