ಮೈಸೂರು

ಜು.14-16: ನಟನ ರಂಗಶಾಲೆಯಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ

ಮೈಸೂರು,ಜು.10:- ಮೈಸೂರಿನ ನಟನರಂಗಶಾಲೆಯಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ನಾಟಕಕಾರ, ಚಿಂತಕ,ರಂಗ ಸಂಘಟಕ, ನೀನಾಸಂ ನ ನಿರ್ಮಾತೃ ಕೆ.ವಿಸುಬ್ಬಣ್ಣ ಅವರ ನೆನಪಿನಲ್ಲಿ ಕಳೆದ ವರ್ಷದಿಂದ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿ ಬೆಂಗಳೂರಿನ ರಂಗ ಶಂಕರದ ಸಹಕಾರದಿಂದ ನಟನವು ಅಂತಾರಾಷ್ಟ್ರೀಯ ನಾಟಕೋತ್ಸವವನ್ನು ಜುಲೈ 14 ರಿಂದ 16ರ ವರೆಗೆರಾಮಕೃಷ್ಣ  ನಗರದಲ್ಲಿರುವ ನಟನರಂಗಶಾಲೆಯಲ್ಲಿ ನಡೆಸಲಿದೆ. ನಟನ ರಂಗ ಶಾಲೆಯ ರೂವಾರಿ ಮಂಡ್ಯ ರಮೇಶ್ ಜನ್ಮದಿನವೂ(ಜುಲೈ 14) ರಂದೇ ಆಗಿದ್ದು. ಹುಟ್ಟಿದ ದಿನವನ್ನುರಂಗ ಚಟುವಟಿಕೆಗಳ, ನಾಟಕಗಳ ಮೂಲಕ ಆಚರಿಸಿಕೊಳ್ಳುವ ಮೂಲಕ ಒಂದುಕೌಟುಂಬಿಕ ಸಂತೋಷವನ್ನುಇಡೀ ಸಮಾಜಕ್ಕೆ ಹಂಚುವ ಮತ್ತು ರಂಗ ಕಾಯಕದ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ನಾಟಕೋತ್ಸವವು ಜುಲೈ 14ರಂದು ಆರಂಭಗೊಳ್ಳಲಿದ್ದು,ಬೆಳಿಗ್ಗೆ 10 ಗಂಟೆಗೆ ಪ್ರಖ್ಯಾತ ಕಲಾವಿದೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಪ್ರಖ್ಯಾತರಂಗ ನಿರ್ದೇಶಕ ಪ್ರಸನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ರಂಗಾಯಣದ ನಿರ್ದೇಶಕಿ  ಭಾಗೀರಥಿ ಬಾಯಿ ಕದಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಎಮ್.ಎಸ್.ಅರ್ಚನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ನಿರ್ದೇಶಕ ಎನ್.ಆರ್.ವಿಶು ಕುಮಾರ್, ಚಿಂತಕ, ನಟ  ಜಿ.ಕೆ.ಗೋವಿಂದರಾವ್, ಖ್ಯಾತ ನಾಟಕಕಾರ ಡಿ.ಎಸ್. ಚೌಗಲೆ,ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ,ಖ್ಯಾತ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ  ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಎಂ.ಜೆರವಿಕುಮಾರ್, ಪ್ರತ್ರಕರ್ತ ಜಿ.ಎನ್. ಮೋಹನ್ ಹಾಗು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್‍ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಅಂತಾರಾಷ್ಟ್ರೀಯ ನಾಟಕೋತ್ಸವದ ಮೊದಲ ನಾಟಕವಾಗಿ ಜವಾಹರಕಲಾಕೇಂದ್ರ, ಜೈಪುರ ಇವರು ಅಭಿನಯಿಸುವ‘ಡೈರಿ ಆಫ್ ಎ ಕಾಕ್ರೋಚ್’ ಎಂಬ ನಾಟಕದ ಪ್ರದರ್ಶನಗೊಳ್ಳಲಿದೆ. ಸಂಜೆ 6.30ಕ್ಕೆ ಡಾ.ಗುಬ್ಬಿ ವೀರಣ್ಣ ಅವರ 125ನೇ ವರ್ಷಾಚರಣೆಗಾಗಿ ನಟನರಂಗಶಾಲೆಯು ಸಿದ್ಧ ಗೊಳಿಸಿದ ಶುದ್ಧ ಕಂಪನಿ ಶೈಲಿಯ ನಾಟಕ ತೋರಣಗಲ್‍ ರಾಜಾರಾಯ ವಿರಚಿತ “ಸುಭದ್ರಾಕಲ್ಯಾಣ”ದ ಪ್ರದರ್ಶನಗೊಳ್ಳಲಿದೆ.

ಜು.15ರಂದು ಇಂಗ್ಲ್ಯಾಂಡ್ ನ ಪ್ರಖ್ಯಾತ ರಂಗಸಂಸ್ಥೆಯಾದ ಫಿಂಗರ್‍ಆಂಡ್‍ಥಂಬ್‍ತಂಡದ ‘ಸ್ಮಾಲ್ ಫೆಬಲ್ಸ್’ ಎಂಬ ನೆರಳು ನಾಟಕವು ಬೆಳಿಗ್ಗೆ 11 ಮತ್ತು ಮಧ್ಯಾಹ್ನ 12.30ಕ್ಕೆ ಪ್ರದರ್ಶನಗೊಳ್ಳಲಿದೆ.  ಸಂಜೆ 6.30ಕ್ಕೆ 215ಕ್ಕೂ ಹೆಚ್ಚು ಪ್ರದರ್ಶನ ಕಂಡ ನಟನರಂಗಶಾಲೆಯ ಜನಪ್ರೀಯ ನಾಟಕ, ಹಬೀಬ್‍ತನ್ವೀರರ ‘ಚೋರಚರಣದಾಸ’ ನಾಟಕವು ಪ್ರದರ್ಶನಗೊಳ್ಳಲಿದೆ ನಿರ್ಮಿತವಾಗಿದೆ. ಜು. 16ರಂದು ಸಂಜೆ 6.30ಕ್ಕೆ ನಟನರಂಗ ಶಾಲೆಯ ವಿನೂತನ ಪ್ರಯೋಗ, ರವೀಂದ್ರನಾಥ ಟ್ಯಾಗೋರರ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನಗೊಳ್ಳಲಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: