ಮೈಸೂರು

ಯಕ್ಷಗಾನ ಸಮಗ್ರ ಕಲೆಯಾಗಿ ರೂಪುಗೊಂಡಿದೆ : ವೀರಪ್ಪ ಮೊಯೊಲಿ

ಮೈಸೂರು,ಜು.10:- ರಾಜ್ಯದ ಭಾಗದ ಯಾವುದೇ ಕಲೆಯಾದರೂ ಅದನ್ನು ಕನ್ನಡಿಗರು ಗೌರವಿಸಬೇಕು ಎಂದು ಸಂಸದ ಎಂ. ವೀರಪ್ಪ ಮೊಯಿಲಿ ತಿಳಿಸಿದರು.

ಮೈಸೂರಿನ ಇನೋವೇಟಿವ್ ಸಂಸ್ಥೆಯು ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ವಾಂಸ ಜಿ.ಎಸ್.ಭಟ್ಟ ಅವರ ಅಭಿನಂದನಾ ಕೃತಿ ಉತ್ತರೋತ್ತರವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಯಕ್ಷಗಾನ ಕಲೆಯನ್ನು ಕರ್ನಾಟಕದ ಎಲ್ಲ ಭಾಗದ ಜನರೂ ತಮ್ಮ ಕಲೆಯೆಂದು ತಿಳಿಯಬೇಕು.ಈ ಹಿಂದೆ ದಕ್ಷಿಣ ಕನ್ನಡ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಾತ್ರ ಯಕ್ಷಗಾನ ಕಂಡು ಬರುತ್ತಿತ್ತು. ಇದೀಗ ಅದರಾಚೆಗೂ ಯಕ್ಷಗಾನ ವ್ಯಾಪಿಸಿದೆ. ಬಡಗುತಿಟ್ಟು, ತೆಂಕುತಿಟ್ಟು ಯಕ್ಷಗಾನದ ನಡುವಿನ ವ್ಯತ್ಯಾಸ ಮರೆಯಾಗಿ ಸಮಗ್ರ ಕಲೆಯಾಗಿ ರೂಪುಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಜಿ.ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪ್ರಾಧ್ಯಾಪಕಿ ಕವಿತಾ ರೈ, ಶಾಸಕ ಪಿ.ವಾಸು, ವಿದ್ವಾಂಸರಾದ ಕಬ್ಬಿನಾಲೆ ವಸಂತ ಭಾರದ್ವಾಜ, ವಿಜ್ಞಾನ ಲೇಖಕ ಎಸ್.ಎನ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: