ಮೈಸೂರು

ಉಚಿತ ಅನಿಲ ಸಂಪರ್ಕ ವಿತರಣೆ

ಮೈಸೂರು,ಜು.10:-ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.7,8,9 ರ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ ವಿತರಿಸಲಾಯಿತು.

ಶಾಸಕ ಎಂ.ಕೆ.ಸೋಮಶೇಖರ್ ಅರ್ಹ 50 ಫಲಾನುಭವಿಗಳಿಗೆ ಅನಿಲ ಸಂಪರ್ಕ ವಿತರಿಸಿದರು. ನಗರಪಾಲಿಕೆ ಸದಸ್ಯರಾದ ಪುರುಷೋತ್ತಮ್, ಚೆನ್ನಪ್ಪ, ವಿ.ಶೈಲೇಂದ್ರ, ಸಹಾಯಕ ಆಯುಕ್ತ ಜವರೇಗೌಡ, ಅಭಿವೃದ್ಧಿ ಅಧಿಕಾರಿ ರಘು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: