
ಕರ್ನಾಟಕ
ಕಾಲುವೆಗೆ ಬಿದ್ದು ಕುರಿಗಾಯಿಗಳ ಸಾವು
ರಾಜ್ಯ(ರಾಯಚೂರು)ಜುಲೈ,10: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ನೀರು ಕುಡಿಯಲು ಹೋಗಿ ಕುರಿಗಾಯಿಗಳು ಕಾಲುವೆಗೆ ಬಿದ್ದು ಇಬ್ಬರು ಸಾವಪ್ಪಿರುವ ಘಟನೆ ದೇವದುರ್ಗದ ಜಾಗಟಗಲ್ ಬಳಿ ನಡೆದಿದೆ.
ಬೆಳಗಾವಿಯ ಜೋಳಕುರಡಿ ಮೂಲದ ಆಲಪ್ಪ(48 ) ಹಾಗೂ ಬಸವ(20) ಸಾವನ್ನಪ್ಪಿರುವ ದುರ್ದೈವಿಗಳು. ನೀರು ಕುಡಿಯಲು ಕಾಲುವೆಗೆ ಇಳಿದಾಗ ಕಾಲು ಜಾರಿ ಬಿದ್ದವನನ್ನು ಕಾಪಾಡಲು ಹೋಗಿ ಕೊನೆಗೆ ಇಬ್ಬರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾಲುವೆ ದಂಡೆಯಲ್ಲಿ ಸಿಕ್ಕ ಚಪ್ಪಲಿ, ಊಟದ ಬುತ್ತಿ, ನೀರಿನ ಬಾಟಲ್ ಆಧಾರದ ಮೇಲೆ ಸಾವನ್ನ ಖಚಿತ ಪಡಿಸಿಕೊಂಡ ಗ್ರಾಮಸ್ಥರು ಶವಗಳನ್ನು ಹೊರತೆಗೆದಿದ್ದಾರೆ. ( ವರಿದಿ: ಪಿ.ಜೆ )