ಮೈಸೂರು

ಕಲೆಯ ಮೂಲಕ ಫ್ರಾನ್ಸ್ – ಭಾರತದ ಬಾಂಧವ್ಯ ವೃದ್ಧಿ

ಕಲೆಯ ಮೂಲಕ ಭಾರತ ಮತ್ತು ಫ್ರಾನ್ಸ್ ಸಂಸ್ಕೃತಿಯೂ ಪರಸ್ಪರರಲ್ಲಿ ವಿನಿಮಯವಾಗಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೊಳಿಸುವ ಸದಾಭಿಲಾಷೆಯೇ ‘ಫ್ರ್ಯಾಂಕೋ-ಇಂಡಿಯನ್ ಸ್ಕೂಲ್ ಆಫ್ ಸಿನಿಮಾ ಅಂಡ್ ಟೆಲಿವಿಷನ್’ ಸ್ಥಾಪನೆಯ ಮೂಲೋದ್ದೇಶವಾಗಿದೆ. ಮೂಲ ಸೌಲಭ್ಯಕ್ಕೆ ಸಂಸ್ಥೆಯಿಂದ ಅನುದಾನ ನೀಡಲಾಗುವುದು ಎಂದು ಫ್ರಾನ್ಸ್ ನ ಪಿಎಸಿಎ ಸಿನಿಮಾ ಮತ್ತು ಅಡಿಯೋ ವಿಷ್ಯುಯಲ್ ಸೇವಾ ಮುಖ್ಯಸ್ಥೆ ಶಾಂತಲಾ ಫಿಶರ್ ತಿಳಿಸಿದರು.
ಅವರು ಶುಕ್ರವಾರದಂದು ಮೈಸೂರು ವಿವಿ ಹಾಗೂ ಫ್ರ್ಯಾಂಕೋ-ಇಂಡಿಯನ್ ಸೊಸೈಟಿ ಸಂಯುಕ್ತಾಶ್ರಯಲ್ಲಿ ಮಾನಸಗಂಗೋತ್ರಿಯ ರಾಣಿಬಹ್ದೂರು ಸಭಾಂಗಣದಲ್ಲಿ ‘ಫ್ರ್ಯಾಂಕೋ-ಇಂಡಿಯನ್ ಸ್ಕೂಲ್ ಆಫ್ ಸಿನಿಮಾ ಅಂಡ್ ಟೆಲಿವಿಷನ್’ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲೆಯೂ ಮೇಳೈಸಿದ್ದು ಚಲನಚಿತ್ರ ನಿರ್ಮಾಣವಾದರೆ ಅತ್ಯುನ್ನತ ಸ್ಥಾನಕೇರಲಿದೆ. ವಿವಿಯ 20 ಎಕರೆ ಪ್ರದೇಶದಲ್ಲಿ ‘ಮಿನಿ ಫಿಲಂ ಸಿಟಿ’ಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗುವುದು ಎಂದರು.
ಸಿನಿಮಾ ಕ್ಷೇತ್ರದ ಕಡೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದು ಈ ಹಿನ್ನೆಲೆಯಲ್ಲಿ ನಿರ್ದೇಶನ, ಸಿನಿಮಾಟೋಗ್ರಫಿ, ಸ್ಕ್ರಿಪ್ಟ್ ರೈಟಿಂಗ್, ಸೌಂಡ್ ಇಂಜಿನಿಯರಿಂಗ್ ಕೋರಿಯಾಗ್ರಫಿ, ಕಾಸ್ಟ್ಯೂಂ ಡಿಸೈನಿಂಗ್, ಡ್ಯಾನ್ಸ್ ಸೇರಿದಂತೆ 31 ಕೋರ್ಸ್ ಗಳ ಡಿಪ್ಲೋಮ, ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಕೋರ್ಸ್ ನಡೆಸಿ ಪ್ರಮಾಣ ಪತ್ರವನ್ನು ಮೈಸೂರು ವಿವಿಯೂ ವಿತರಿಸುವುದು. ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಉತ್ತಮ ಅವಕಾಶ ಲಭಿಸುವುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸಿಎಣ್ ಆರ್ ಎಸ್ ಫ್ರಾನ್ಸ್ ನ ಭಾರತಶಾಸ್ತ್ರಜ್ಞೆ ಡಾ.ತಾರಾ ಮೈಕೇಲ್, ಫ್ರಾನ್ಸ್ ಚಲನಚಿತ್ರ ನಿರ್ಮಾಪಕ ಫಿಲಿಪ್ ಮೋರಿಸ್ ಭಾಗವಹಿಸಿದ್ದರು. ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಎಫ್.ಐಎಫ್ ಎಸ್ ನ ಅಧ್ಯಕ್ಷ ಹಾಗೂ ನಿರ್ದೇಶಕ ಮಧು ತ್ಯಾಗರಾಜನ್, ಕುಲಸಚಿವ ಪ್ರೊ.ಸಿ.ಬಸವರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: