ಮೈಸೂರು

ಗಜಪಯಣಕ್ಕೆ ಅರಣ್ಯ ಇಲಾಖೆ ಸಜ್ಜು

ಮೈಸೂರು,ಜು.10:-  ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ -2017ರ ಪ್ರಯುಕ್ತ  ಆಗಸ್ಟ್ ಎರಡನೇ ವಾರದಲ್ಲಿ ಗಜಗಳು ಆಗಮಿಸಲಿವೆ.

ಜಂಬೂ ಸವಾರಿಯಲ್ಲಿ 12 ಆನೆಗಳು ಭಾಗವಹಿಸಲಿದ್ದು, ಮೊದಲ ಹಂತದಲ್ಲಿ 5 ಆನೆಗಳ ಆಗಮನವಾಗಲಿದೆ. ಅಧಿಕಾರಿ ಏಳುಕುಂಡಲ ಹಾಗೂ ವೈದ್ಯಾಧಿಕಾರಿ ನಾಗರಾಜು ನೇತೃತ್ವದಲ್ಲಿ ಪಟ್ಟಿ ರೆಡಯಾಗಿದೆ. ಹುಣಸೂರಿನ ವೀರನ ಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ನಾಗರಹೊಳೆಯ ಬಳ್ಳೆಯಲ್ಲಿರುವ ಅರ್ಜುನ  ಜಂಬೂ ಸವಾರಿಯಲ್ಲಿ ಅಂಬಾರಿ ಹೊರಲಿದ್ದಾನೆ. ಮತ್ತಿಗೂಡು ಆನೆ ಶಿಬಿರದಲ್ಲಿರುವ ಅಭಿಮನ್ಯು, ಬಲರಾಮ,ದುಬಾರೆ ಆನೆ ಶಿಬಿರದಲ್ಲಿರುವ ವಿಜಯ, ಕಾವೇರಿ, ಗೋಪಾಲಸ್ವಾಮಿ, ಹರ್ಷ, ಪ್ರಶಾಂತ, ವಿಕ್ರಮ, ಗೋಪಿ ಕೆ.ಗುಡಿ ಆನೆ ಶಿಬಿರದಲ್ಲಿರುವ ದುರ್ಗ ಪರಮೇಶ್ವರಿ, ಗಜೇಂದ್ರ ಆನೆಗಳ ಆಗಮನಕ್ಕೆ ತಯಾರಿ ನಡೆದಿದ್ದು,  12 ಆನೆಗಳ ಜೊತೆಗೆ ಶ್ರೀನಿವಾಸ್ ಹಾಗೂ ಭೀಮಾ ಆನೆ ಕೂಡ ಆಗಮಿಸಲಿವೆ. ಗಜಪಯಣಕ್ಕೆ ಅರಣ್ಯ ಇಲಾಖೆ ಸಜ್ಜುಗೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: