ಕರ್ನಾಟಕಪ್ರಮುಖ ಸುದ್ದಿ

ಬಸ್-ಕಾರು ನಡುವೆ ಡಿಕ್ಕಿ: ಉರುಳಿ ಬಿದ್ದ ಬಸ್ : ಮಹಿಳೆ ಸಾವು

ರಾಜ್ಯ(ರಾಯಚೂರು)ಜು.10:- ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಬಸ್ ಉರುಳಿ ಬಿದ್ದ ರಾಯಚೂರಿನ ಹೊರವಲಯದಲ್ಲಿರುವ ಪವರ್ ಗ್ರೀಡ್ ಬಳಿ ನಡೆದಿದ್ದು, ಘಟನೆಯಲ್ಲಿ  ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.

ಮೃತ ಮಹಿಳೆಯನ್ನು ಅಮೃತ(25)ಎಂದು ಗುರುತಿಸಲಾಗಿದೆ. ಬಸ್ಸಿನಲ್ಲಿದ್ದ  ೨೦ ಜನರು ಗಾಯಗೊಂಡಿದ್ದಾರೆ. ಘಟನೆಯ ಕುರಿತು ತಿಳಿಯುತ್ತಿದ್ದಂತೆ  ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.
ಬಸ್ ರಾಯಚೂರಿನಿಂದ ಕಲಬುರಗಿ ಕಡೆ ಹೋಗುತ್ತಿತ್ತು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: