ಕ್ರೀಡೆಪ್ರಮುಖ ಸುದ್ದಿ

ನಮ್ಮ ತಪ್ಪುಗಳಿಂದಲೇ ವಿಂಡೀಸ್ ವಿರುದ್ಧ ಸೋಲು: ಕೊಹ್ಲಿ

ಪ್ರಮುಖ ಸುದ್ದಿ, ಕಿಂಗ್‌ಸ್ಟನ್, ಜು.೧೦: ನಮ್ಮ ತಪ್ಪುಗಳಿಂದಲೇ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಏಕೈಕ ಟಿ೨೦ ಪಂದ್ಯದಲ್ಲಿ ೯ ವಿಕೆಟ್‌ಗಳ ಹೀನಾಯವಾಗಿ ಸೋಲುಂಡ ಬಳಿಕ ಮಾತನಾಡಿದ ಅವರು, ವಿಂಡೀಸ್ ವಿರುದ್ಧ ಗೆಲ್ಲಲು ಅರ್ಹವಾಗಿರಲಿಲ್ಲ. ಪಂದ್ಯದಲ್ಲಿ ನಾವು ಉತ್ತಮ ಮೊತ್ತ ಕಲೆಹಾಕಿದರು ನಮ್ಮ ಕೆಲ ತಪ್ಪುಗಳಿಂದ ಪಂದ್ಯವನ್ನು ಕೈಚೆಲ್ಲಬೇಕಾಯಿತು. ಅನಿವಾರ್ಯ ಕ್ಯಾಚ್‌ಗಳನ್ನು ಬಿಟ್ಟಿದ್ದೆ ತಂಡಕ್ಕೆ ದುಬಾರಿಯಾಯಿತು. ಮತ್ತೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಹಿನ್ನಡೆ ಸಾಧಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: