ಪ್ರಮುಖ ಸುದ್ದಿಮೈಸೂರು

ಮುಂದಿನ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್

ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಮಾದರಿಯಲ್ಲಿ ಸಮವಸ್ತ್ರ ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಮವಸ್ತ್ರ, ಸೈಕಲ್ ಮತ್ತು ಶೂ ವಿತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಮುಂದಿನ ವರ್ಷದಿಂದ 8,9 ಮತ್ತು 10ನೇ ತರಗತಿಯ 6 ಲಕ್ಷ ವಿದ್ಯಾರ್ಥಿನಿಯರಿಗೆ 2 ಜೋಡಿ ಚೂಡಿದಾರ ವಿತರಣೆಯಾಗಲಿದೆ. ಪ್ರತಿ ವರ್ಷ ಜೂನ್ ಅಂತ್ಯದೊಳಗೆ ಸೈಕಲ್, ಶೂ, ಸಮವಸ್ತ್ರ ವಿತರಣೆ ಮಾಡುತ್ತಿದದ್ಉ, ಇದರಲ್ಲಿ ವಿಳಂಬವಾಗದಂತೆ ಈಗಲೇ ಟೆಂಡರ್ ಕರೆಯುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಮಧ್ಯಾಹ್ನ ಬಿಸಿಯೂಟ ಗುಣಮಟ್ಟದ ಬಗ್ಗೆ ಅನೇಕ ದೂರುಗಳು ಬಂದಿದ್ದು, ಊಟದ ಗುಣಮಟ್ಟ ಪರೀಕ್ಷಿಸಲು ಕ್ಲಸ್ಟರ್ ಮಟ್ಟದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುವುದು. ಮೈಸೂರು, ಮಂಡ್ಯ, ರಾಮನಗರದಲ್ಲಿ ಈ ಕೇಂದ್ರಗಳನ್ನು ಈ ವರ್ಷವೇ ತೆರೆಯಲಾಗುವುದು ಎಂದು ತನ್ವೀರ್‍ ಸೇಠ್ ತಿಳಿಸಿದರು.

Leave a Reply

comments

Related Articles

error: