ಪ್ರಮುಖ ಸುದ್ದಿಮೈಸೂರು

ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡ ಪ್ರೊ.ಕೆ.ಎಸ್.ರಂಗಪ್ಪ

ಮೈಸೂರು,ಜು.10:- ಮೈಸೂರಿನ ಸಾ.ರಾ.ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡರು.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಹಿಂದೆ ಸೂಟ್ ಕೇಸ್ ರಾಜಕಾರಣ ಇದ್ದದ್ದು ಸತ್ಯ. ಅವರು ಯಾರೂ ಈವಾಗ ಪಕ್ಷದಲ್ಲಿ ಇಲ್ಲ. ಅವರನ್ನು ಗಮನದಲ್ಲಿಟ್ಟುಕೊಂಡು ಪ್ರಜ್ವಲ್ ಹೇಳಿದ್ದಾರೆ ಎಂದರು. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದೇನೆ.ನನ್ನನ್ನು  ಕ್ಷಮೆ ಕೇಳೋದಕ್ಕೆ ಅವನೇನು ತಪ್ಪು ಮಾಡಿಲ್ಲ. ಪಕ್ಷದಲ್ಲಿ ಸೂಟ್ ಕೇಸ್ ಪಡೆಯುತ್ತಿದ್ದದ್ದು ನಿಜ.ಅವರು ಮುಂದಿನ ಸಾಲಿನಲ್ಲಿ ಕೂರುತ್ತಾ ಇದ್ದದ್ದೂ ನಿಜ. ಆದರೆ ಅವರೆಲ್ಲ ಈಗಾಗಲೇ ಪಕ್ಷ ಬಿಟ್ಟು ಹೊರಗಡೆ ಹೋಗಿದ್ದಾರೆ. ಬಹುಶಃ ಅವರನ್ನು  ಕುರಿತು ಅವನು ಹೇಳಿಕೆ ನೀಡಿರಬಹುದು ಎಂದು ಜೆ ಡಿ ಎಸ್ ಬಂಡಾಯ ಶಾಸಕರಿಗೆ ಟಾಂಗ್ ನೀಡಿದರು.
ಕಾರ್ಯಕ್ರಮಕ್ಕೆ ನಗರ ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇದೊಂದು ಕಾರ್ಯಕರ್ತರ ಸಭೆ. ಯಾರನ್ನೂ ಆಹ್ವಾನ ಮಾಡುವ ಅಗತ್ಯವಿಲ್ಲ. ಅವರು ಗೈರಾಗಿರುವ ಕಾರಣ ನನಗೆ ಗೊತ್ತಿಲ್ಲ.ಈ ಕುರಿತು ವಿಚಾರಣೆ ನಡೆಸುತ್ತೇನೆ.ಈ ಕುರಿತು ಸಮಜಾಯಿಷಿ ನೀಡುವ ಅಗತ್ಯವಿಲ್ಲ ಎಂದರು. ಮಂಗಳೂರು ಗಲಭೆ ಪ್ರಕರಣಕ್ಕೆ ಮುಖ್ಯಮಂತ್ರಿ ವಿರುದ್ದ ಕಿಡಿ ಕಾರಿದ ಕುಮಾರಸ್ವಾಮಿ ಸಿದ್ದರಾಮಯ್ಯಗೆ ಒಂದು ತಿಂಗಳ ಹಿಂದೆ ಮಂಗಳೂರು ಕರ್ನಾಟಕದಲ್ಲಿದೆ ಎಂಬುದೆ ಗೊತ್ತಿರಲಿಲ್ಲ. ಮಂಗಳೂರು ರಾಜ್ಯ ಸರ್ಕಾರದ ವೈಫಲ್ಯ, ಗೃಹ ಇಲಾಖೆ ಸಿಎಂ ಬಳಿ ಇದ್ದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಜಾತಿ ಧರ್ಮದ ಮೇಲೆ ರಾಜಕಾರಣ ಮಾಡುವುದನ್ನು ಬಿಡಬೇಕು. ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಮತಕ್ಕಾಗಿ ಕರಾವಳಿ ಪ್ರದೇಶವನ್ನು ಗಲಭೆ ಪೀಡಿತ ಪ್ರದೇಶವಾಗಿ ಮಾಡಿವೆ. ಹಲವು ವರ್ಷಗಳಲ್ಲಿ ಹಲವು ಅಮಾಯಕರ ಪ್ರಾಣವನ್ನು ತೆಗೆದುಕೊಂಡ ನಿಮಗೆ ಅವರ ನೋವು ಗೊತ್ತಾಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಸದಾನಂದಗೌಡರ ಟ್ವೀಟ್ ಗೆ ತಿರುಗೇಟು ನೀಡಿದ ಅವರು ನಿಮಗೆ ಹಿಂದೆಯೇ ಜ್ಞಾನೋದಯವಾಗಿದ್ದರೇ ಎಷ್ಟೋ ಜನರ ಪ್ರಾಣವನ್ನು ಉಳಿಸಬಹುದಿತ್ತು. ವಿಶ್ವದಲ್ಲೇ ಹೆಸರು ಮಾಡಲು ಅವಕಾಶವಿರುವ ಕರಾವಳಿ ಪ್ರದೇಶವನ್ನು ಚಿವುಟಿ ಹಾಕುತ್ತಿದ್ದಾರೆ. ಜಾಗದ ಜನ ನೆಮ್ಮದಿಯಾಗರಬೇಕಾದರೇ ಧರ್ಮದ ರಾಜಕಾರಣವನ್ನು ಬಿಡಿ. ಅಲ್ಲಿ ಮಾಡಬೇಕಾಗಿರುವುದು ಪ್ರತಿಭಟನೆಯಲ್ಲ ಶಾಂತಿ ಸಭೆ.ನಮ್ಮ ಪಕ್ಷದಿಂದಲ್ಲೂ ಕೂಡ ಶಾಂತಿ ಸಭೆ ನಡೆಸಲು ಚಿಂತನೆ ನಡೆದಿದೆ ಎಂದರು.
ಇದೇ ಸಂದರ್ಭ ಹುಣಸೂರು ಕ್ಷೇತ್ರದಿಂದ ಹೆಚ್.ವಿಶ್ವನಾಥ್ ಜೆಡಿಎಸ್ ಅಭ್ಯರ್ಥಿ ಎಂದು  ಜಿ.ಟಿ.ದೇವೆಗೌಡ ಘೋಷಣೆ ಮಾಡಿದರು.ನನ್ನ ಮಗ ಹರೀಶ್ ಗೌಡ, ಕುಟುಂಬ ಕ್ಷೇತ್ರ ತ್ಯಾಗ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹಲವರು ಜೆಡಿಎಸ್ ಸೇರ್ಪಡೆಗೊಂಡರು.  ಈ ಸಂದರ್ಭ ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಮತ್ತಿತರ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು.  (ಕೆ.ಎಸ್, ಆರ್.ವಿ,ಎಸ್.ಎಚ್)

Leave a Reply

comments

Related Articles

error: