
ಮೈಸೂರು
ಜೂಜಾಟ : ಐವರ ಬಂಧನ
ಮೈಸೂರು,(ಪಿರಿಯಾಪಟ್ಟಣ)ಜು.10:- ಜೂಜಾಟದಲ್ಲಿ ತೊಡಗಿದ್ದ ಐದು ಮಂದಿಯನ್ನು ಬೈಲಕುಪ್ಪೆ ಪೋಲಿಸರು ಬಂಧಿಸಿ 3,650 ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪ್ರದೀಪ(51), ಕುಶಾಲಪ್ಪ(28),ನಾರಾಯಣ(42), ಮಹದೇವ(39), ಕುಮಾರ(41), ಎಂದು ಗುರುತಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಜಮೀನೊಂದರಲ್ಲಿ ಜೂಜಾಡುತಿದ್ದ ಖಚಿತ ಮಾಹಿತಿ ಪಡೆದ ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಎಚ್.ಎನ್.ಸಿದ್ದಯ್ಯ ನೇತೃತ್ವದಲ್ಲಿ ಪಿರಿಯಾಪಟ್ಟಣ ಪಿಎಸ್ಐ ಚೇತನ್ ಹಾಗೂ ಸಿಬ್ಬಂದಿಗಳಾದ ಸೊಮಶೇಖರ್, ದೊಡ್ಡಸ್ವಾಮಿ, ಶೇಖರ, ನಂದೀಶ, ಕಾರ್ಯಾಚರಣೆ ನಡೆಸಿದರು. (ಆರ್.ಬಿ.ಆರ್,ಎಸ್.ಎಚ್)