ಮೈಸೂರು

ಬೌದ್ಧ ಧರ್ಮ ಸೇರುವುದು ಡಾ.ಬಿ.ಆರ್. ಅಂಬೇಡ್ಕರ್ ಆಶಯವಾಗಿತ್ತು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

‘ದಮ್ಮ ದೀಕ್ಷಾ ಸ್ಮರಣೆ’ ವಿಶೇಷ ಉಪನ್ಯಾಸ ನೀಡಿದ ಡಾ.ಮುಡ್ನಾಕೂಡು ಚಿನ್ನಸ್ವಾಮಿ

ದಲಿತರು ದಾಸ್ಯದಿಂದ ಹಾಗೂ ದುಶ್ಚಟಗಳಿಂದ ಮುಕ್ತರಾಗಿ ಸರ್ವ ಸಮಾನತೆ ಸಾರುವ ಬೌದ್ಧ ಧರ್ಮ ಸೇರಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತಿಮ ಆಶಯವಾಗಿತ್ತು. ಇಂದು ಕೇವಲ ಮೀಸಲಾತಿಗಾಗಿ ದಲಿತರು ಅಂಬೇಡ್ಕರ್‍ ಅವರಿಗೆ ಮಾನ್ಯತೆ ನೀಡಿದ್ದಾರೆ ಎನ್ನುವ ಸಂಶಯವಿದೆ.  ದಲಿತರು ಎಲ್ಲಿಯವರೆಗೂ ಬೌದ್ಧ ಧರ್ಮ ಸ್ವೀಕರಿಸುವುದಿಲ್ಲವೋ ಅಲ್ಲಿಯವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಗೌರವ ಸಲ್ಲಿಸಿದಂತಾಗುವುದಿಲ್ಲ ಎಂದು ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ಅವರು  ಶುಕ್ರವಾರದಂದು ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಡಾ.ಅಂಬೇಡ್ಕರ್ ಅವರ 60ನೇ ವರ್ಷದ ದಮ್ಮ ದೀಕ್ಷಾ ಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ ‘ಬೌದ್ಧ ಸಂಸ್ಕೃತಿಯ ಅನನ್ಯತೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೈಚಾರಿಕ ವೈಜ್ಞಾನಿಕ ಸರ್ವ ಸಮಾನತೆ ಸಂದೇಶ ಸಾರುವ ಬೌದ್ಧ ಧರ್ಮದಲ್ಲಿ ಮಾನವೀಯತೆ ಸಾರವಿದ್ದು ಮುಕ್ತಿಯ ಮಾರ್ಗವಿದೆ ಎಂದು ಅಂಬೇಡ್ಕರ್ ತಿಳಿಸಿದ್ದರು. ಆದರೆ, ದಲಿತರಲ್ಲೇ ಮತ್ತೊಂದು ಜಾತಿ ಇದೆ ಎನ್ನುವ ಸಂದೇಹವಿದೆ. ಅಂಬೇಡ್ಕರ್ ಅವರ ಮಹದಾಸೆಯಾದ ಮೀಸಲಾತಿಯಿಂದ ದಲಿತರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿ ಜಾಗೃತರಾಗುತ್ತಿದ್ದು ತಮ್ಮ ದಾಸ್ಯ ಸಂಸ್ಕೃತಿಯಿಂದ ಹೊರಬರಬಂದು ಅಂಬೇಡ್ಕರ್ ಅವರ ಧಾರ್ಮಿಕ ಕ್ರಾಂತಿಯ ಬಗ್ಗೆ ದಲಿತರಲ್ಲಿ ಅರಿವು ಮೂಡಿಸಬೇಕು ಎಂದು ಆಶಿಸಿದರು.

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಉದ್ಘಾಟಿಸಿದರು. ಡಾ.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

 

 

Leave a Reply

comments

Related Articles

error: