ಪ್ರಮುಖ ಸುದ್ದಿಮೈಸೂರು

ಅಧಿದೇವತೆ ಚಾಮುಂಡೇಶ್ವರಿಯ ಅದ್ಧೂರಿ ರಥೋತ್ಸವ

ಚಾಮುಂಡಿಬೆಟ್ಟದಲ್ಲಿ ಶನಿವಾರ ನಾಡ ಅಧಿದೇವತೆ ಚಾಮುಂಡೇಶ್ವರಿಯ ರಥೋತ್ಸವ ಅದ್ಧೂರಿಯಿಂದ ನೆರವೇರಿತು.

ಪ್ರತಿ ವರ್ಷ ವಿಜಯದಶಮಿ ನಡೆದ 5ನೇ ದಿನಕ್ಕೆ ಈ ರಥೋತ್ಸವ ನಡೆಯುತ್ತಿದ್ದು, ಚಾಮುಂಡೇಶ್ವರಿಯ ಉತ್ಸವಮೂರ್ತಿಗೆ ರಾಜ ಮನೆತನದವರು ಪೂಜೆ ಸಲ್ಲಿಸಿದರು. 7:45 ರಿಂದ 8:20ರ ನಡುವೆ ಸಲ್ಲುವ ಶುಭಲಗ್ನದಲ್ಲಿ ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಥೋತ್ಸವಕ್ಕೆ ಮಂಗಳ ಆರತಿ ಮಾಡಿ ಚಾಲನೆ ನೀಡಿದರು. ವಿಶೇಷ ಪ್ರಾರ್ಥನೆಯ ಬಳಿಕ ಪುರೋಹಿತರು ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿಸಿದರು. ಸಾಂಪ್ರದಾಯಿಕ ಆಚರಣೆಗಳ ಬಳಿಕ ಮಹರಾಜ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ಶಾಸಕ ಸೋಮಶೇಖರ್, ಜಿ.ಟಿ.ದೇವೇಗೌಡ ಅವರು ಭಕ್ತರೊಂದಿಗೆ ಸೇರಿ ಚಾಮುಂಡೇಶ್ವರಿ ರಥವನ್ನೆಳೆದರು. ಉತ್ಸವಮೂರ್ತಿಯನ್ನು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ವೀರಗಾಸೆ ನೃತ್ಯ, ಪೊಲೀಸ್ ಬ್ಯಾಂಡ್ ಮತ್ತು ಫಿರಂಗಿ ಗುಂಡು ಪ್ರದರ್ಶನ ನಡೆಯಿತು. ನವವಿವಾಹಿತರು ನಾಡದೇವತೆ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಆಗಮಿಸಿದ್ದುದು ಪ್ರಮುಖ ವಿಶೇಷವಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.

ratotsava1-wಮೈಸೂರು ಮಹಾಸಂಸ್ಥಾನದ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ರಥೋತ್ಸವದ ನಿಮಿತ್ಯ ಇಂದು ತಾಯಿಯ ಪ್ರತಿಮೆಗೆ ವಿವಿಧ ಬಗೆಯ ಹೂ ಹಾಗೂ ಆಭರಣಗಳಿಂದ ಅಲಂಕಾರ ಮಾಡಲಾಗಿದ್ದು ಸರ್ವಾಲಂಕಾರ ಭೂಷಿತೆ  ತಾಯಿ ಚಾಮುಂಡಿಯ ದಿವ್ಯ ದರ್ಶನವನ್ನು ಬೆಳಗಿನಿಂದಲೇ ಬೆಟ್ಟಕ್ಕೆ ಹರಿದು ಬಂದ ಜನಸಾಗರ ಪಡೆದು ಧನ್ಯರಾದರು.

ನಾಡಹಬ್ಬ ದಸರಾ ಮಹೋತ್ಸವ ವಿಜಯದಶಮಿಯ ನಂತರದ ಐದನೇ ದಿನದಂದು ಚಾಮುಂಡಿ ರಥೋತ್ಸವ ಜರುಗಿಲಿದ್ದು ಈ ಹಿನ್ನಲೆಯಲ್ಲಿ ಶನಿವಾರ ಬೆಳಗಿನ ಶುಭ ಬ್ರಾಹ್ಮಿ ಮೂರ್ಹತದಲ್ಲಿಯೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಅಭಿಷೇಕವು ಹಾಗೂ ಶೋಡಷೋಪಚಾರದ ಪೂಜೆಯನ್ನು ಅಮ್ಮನವರಿಗೆ ನೆರವೇರಿಸಲಾಯಿತು.

ಚಾಮುಂಡಿ ತಾಯಿಗೆ ಪ್ರಿಯವಾದ ತಾವರೆ, ಮಲ್ಲಿಗೆ, ಜಾಜಿ, ಕನಕಾಂಬರ, ಸ್ಫಟಿಕ ಹೂವುಗಳು ಸೇರಿದಂತೆ ರಾಜ ವೈಭವದ ಪಾರಂಪರಿಕ ಆಭರಣಗಳಾದ ಮುತ್ತಿನ ಹಾರ, ಪಚ್ಚೆ ಹಾರ, ಸ್ಫಟಿಕ ಹಾರದಿಂದ ಅಲಂಕಾರ ಮಾಡಲಾಗಿತ್ತು. ಅಮ್ಮನವರ ಈ ದಿವ್ಯ ವಿಶೇಷ ರೂಪ ನೋಡಲು ರಾಜ್ಯ ಸೇರಿದಂತೆ ನೆರೆ ರಾಜ್ಯದ ಸಾವಿರಾರು ಜನ ಪ್ರವಾಸಿಗರ ದಂಡೇ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದು ಭಕ್ತಿ ಪರವಶರಾದರು.

chamundi-new-1

 

 

 

 

Leave a Reply

comments

Related Articles

error: