ಮೈಸೂರು

ಕುವೆಂಪು ಶಾಲಾ ಆವರಣದಲ್ಲಿ ಕೊಠಡಿ ಉದ್ಘಾಟನೆ

ಮೈಸೂರು,ಜು.11:-2013-14ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಕಾರ್ಯಕ್ರಮದಡಿ ಮೈಸೂರುನಗರದ ಬೃಂದಾವನ ಬಡಾವಣೆಯ ಕುವೆಂಪು ಶಾಲಾ ಆವರಣದಲ್ಲಿ ಕೊಠಡಿಗಳನ್ನು ನಿರ್ಮಿಸಿದ್ದು, ಶಾಸಕ ಪಿ.ವಾಸು ಉದ್ಘಾಟಿಸಿದರು.

ಸುಮಾರು 24ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಿದ ಶಾಲಾಕಟ್ಟಡವನ್ನು ಶಾಸಕ ಪಿ.ವಾಸು ಉದ್ಘಾಟನೆಗೊಳಿಸಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ನಿರ್ಮಿಸಲಾಗಿದ್ದು, ಸದುಪಯೋಗವಾಗಬೇಕು ಎಂದರು. ಶಾಲೆಯ ಕೊಠಡಿಯ ಬೆಂಚಿನಲ್ಲಿ ಕುಳಿತು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಈ ಸಂದರ್ಭ ಶಾಲೆಯ ಶಿಕ್ಷಕ ವೃಂದ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: