
ಮೈಸೂರು
ಸುನಿಲ್ ಬೋಸ್ ಗೆ ನೋಟಿಸ್ ಜಾರಿ: ಜುಲೈ 25 ರಂದು ವಿಚಾರಣೆ
ಮೈಸೂರು, ಜು.11: ಅಕ್ರಮ ಮರಳು ಗಣಿಗಾರಿಕೆ ಪ್ರಕರಣ ಲಂಚ ಸ್ವೀಕರಿಸಲು ಅಧಿಕಾರಿಗೆ ಪ್ರೇರೇಪಿಸಿದ ಆರೋಪದ ಹಿನ್ನೆಲೆ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ನನ್ನು ಏಕೆ ಆರೋಪಿ ಮಾಡಬಾರದು ಎಂದು ಮೈಸೂರು ನ್ಯಾಯಾಲಯ ಪ್ರಶ್ನೆ ಎತ್ತಿದೆ.
ದೂರುದಾರ ಬಸವರಾಜ್ ಹೇಳಿಕೆ ಮೇರೆಗೆ ಸುನಿಲ್ ಬೋಸ್ ಗೆ ಮೈಸೂರು ನ್ಯಾಯಾಲಯ ನೋಟಿಸ್ ನೀಡಿದೆ. ಮೈಸೂರಿನ 3 ನೇ ಎ.ಡಿ.ಜೆ ಹಾಗೂ ಲೋಕಾಯುಕ್ತ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ. ಹಿಂದೆ ಬೋಸ್ ಈ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಹೈಕೋರ್ಟ್ ನಲ್ಲಿ ಕೇಳಿಕೊಂಡಿದ್ದರು. ಆದರೆ ಈಗ ಕೋರ್ಟ್ ನೋಟಿಸ್ ನಿಂದ ಮತ್ತೆ ಸಂಕಷ್ಟ ಎದುರಾಗಿದೆ. ಮುಂದಿನ ವಿಚಾರಣೆ ಜುಲೈ 25 ರಂದು ನಡೆಯಲಿದೆ.
ರಾಜ್ಯ ಸರ್ಕಾರ ಬೋಸ್ ರನ್ನು ಈಗಷ್ಟೇ ಟಿ.ನರಸೀಪುರ ಕ್ಷೇತ್ರದ ವಸತಿ ಇಲಾಖೆಯ ಉಸ್ತುವಾರಿ ಸಮಿತಿ ಸದಸ್ಯನಾಗಿ ಆದೇಶ ಮಾಡಿತ್ತು. (ವರದಿ: ಆರ್.ವಿ, ಎಲ್.ಜಿ)