ಕರ್ನಾಟಕ

ದಲಿತ ಕಲಾವಿದರಿಗೆ ಸಿಂಗಾಪುರ ಪ್ರವಾಸ ಭಾಗ್ಯ

ಬೆಂಗಳೂರು: ಅಕ್ಕ ಕನ್ನಡ ಸಮ್ಮೇಳನಕ್ಕೆ ವೀಸಾ ಸಿಗದೆ ಅಮೆರಿಕಾ ಪ್ರವಾಸ ವಂಚಿತರಾಗಿದ್ದ ದಲಿತ ಕಲಾವಿದರಿಗೆ ಅ.29 ಮತ್ತು 30ರಂದು ಸಿಂಗಾಪುರದಲ್ಲಿ ನಡೆಯಲಿರುವ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗಿಯಾಗುವ ಅವಕಾಶ ಒದಗಿಬಂದಿದೆ.

ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಮಾತನಾಡಿ, ಸಿಂಗಾಪುರಕ್ಕೆ ತೆರಳುತ್ತಿರುವ 60 ಮಂದಿ ಕಲಾವಿದರ ತಂಡದಲ್ಲಿ 9 ಮಂದಿ ಜಾನಪದ ಕಲಾತಂಡವಿದೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಆಗದ ದಲಿತ ಕಲಾವಿದರು ಈಗ ಸಿಂಗಾಪುರದಲ್ಲಿ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶಿಸಲಿದ್ದಾರೆ ಎಂದರು.

ಉಡುಪಿಯ ಶ್ರೀಮಠಕ್ಕೆ ಮುತ್ತಿಗೆ ಹಾಕಬಾರದು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ದಲಿತರ ಕಾಲೊನಿಗಳಿಗೂ ಭೇಟಿ ನೀಡಿದ್ದಾರೆ. ದಲಿತ ಸಂಘಟನೆಗಳೊಂದಿಗೆ ಚರ್ಚಿಸಿ, ಮುತ್ತಿಗೆ ಹಾಕುವುದು ತಪ್ಪು ಎಂದು ಹೇಳಿದರು.

Leave a Reply

comments

Related Articles

error: