ಮೈಸೂರು

ಮೈಸೂರಿನಲ್ಲಿಯೇ ಶ್ರೀವಿದ್ಯೇಶತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವೃತ

ಮೈಸೂರು, ಜು. 11 : ಉಡುಪಿ ಭಂಡಾರಕೇರಿ ಮಠಾಧೀಶರಾದ  ಪರಮ ಪೂಜ್ಯ ಶ್ರೀ ವಿದ್ಯೇಶತೀರ್ಥ ಶ್ರೀ ಪಾದಂಗಳವರ ಚಾತುರ್ಮಾಸ್ಯ ವೃತವನ್ನು ಜು.13 ರಿಂದ ಮೈಸೂರಿನಲ್ಲಿ ಕೈಗೊಳ್ಳಲಿದ್ದಾರೆಂದು ಸಮಾಜ ಸೇವಕ ಕೆ.ರಘುರಾಂ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.13ರ ಮಧ್ಯಾಹ್ನ 3 ರಿಂದ ಗನ್ ಹೌಸ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ ಚಾತುರ್ಮಾಸ್ಯ ಸಮಿತಿಯೂ ಮೆರವಣಿಗೆಯ ಮೂಲಕ ಶ್ರೀಗಳನ್ನು ಕರೆತರಲಾಗುವುದು. ನಂತರ ಬಹಿರಂಗ ಸಭೆ ನಡೆಯುವುದು. ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕಾರ್ಪೋರೇಷನ್ ಲಿ.ನ ಉಪಾಧ್ಯಕ್ಷ ಎಚ್.ವಿ.ರಾಜೀವ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಚಾತುರ್ಮಾಸ್ಯದ ಹಿನ್ನಲೆಯಲ್ಲಿ ಸೆ.9ರವರೆಗೆ ಪ್ರತಿ ದಿನ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾದಪೂಜೆ-ಭಿಕ್ಷಾ ವಂದನೆ, ಪ್ರವಚನ, ಭಜನೆ, ವಿದ್ವತ್ ಗೋಷ್ಟಿ, ಹಬ್ಬಗಳ ಆಚರಣೆ, ವಿವಿಧ ಆಶ್ರಮ-ದೇವಾಲಯಗಳಿಗೆ ಭೇಟಿ ಕಾರ್ಯಕ್ರಮಗಳು ಜರುಗುವುದು ಎಂದು ವಿವರಿಸಿದರು.

ಗೋಷ್ಟಿಯಲ್ಲಿ  ವಿ.ಕೃಷ್ಣಕುಮಾರ್ ಆಚಾರ್ಯ, ಮಧುಸೂದನ ಪದಕಿ, ಎಚ್.ಆರ್.ನಾಗೇಂದ್ರ, ಎಸ್.ಎಸ್.ರವಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: