ಕ್ರೀಡೆಮೈಸೂರು

ಸೆಪ್ಟಂಬರ್ 16 ರಿಂದ ‘ಕೆಪಿಎಲ್– 2016’

ಟಿ20 ಕ್ರಿಕೆಟ್ ಪಂದ್ಯಾವಳಿಯಾದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ 5ನೇ ಆವೃತ್ತಿಯ ವೇಳಾಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ) ಪ್ರಕಟಿಸಿದ್ದು, ಪಂದ್ಯಗಳು ಸೆಪ್ಟಂಬರ್ 16ಕ್ಕೆ ಆರಂಭಗೊಂಡು ಅಕ್ಬೋಬರ್ 1ಕ್ಕೆ ಸಮಾರೋಪಗೊಳ್ಳಲಿದೆ.

ಈ ಬಾರಿ ಕೆಪಿಎಲ್ ಪಂದ್ಯಗಳು ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಪ್ರಥಮ ಹಂತದ ಪಂದ್ಯಾವಳಿಗಳು ಸೆಪ್ಟಂಬರ್ 22ರ ವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನಲ್ಲಿ ನಡೆಯಲಿವೆ. ಸೆಪ್ಟಂಬರ್ 24ರಿಂದ 2ನೇ ಹಂತದ ಪಂದ್ಯಾವಳಿಗಳು ಹುಬ್ಬಳ್ಳಿಯ ಕೆಎಸ್‍ಸಿಎ ಮೈದಾನದಲ್ಲಿ ನಡೆಯಲಿದ್ದು, ಅಕ್ಟೋಬರ್ 1ಕ್ಕೆ ಹುಬ್ಬಳ್ಳಿಯಲ್ಲೇ ಫೈನಲ್ ಪಂದ್ಯ ನಡೆಯಲಿದೆ.

ಐಪಿಎಲ್ ಮಾದರಿ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಕೆಪಿಎಲ್ ನಡೆಸುವ ಕನಸು ಕಂಡವರು ಮೈಸೂರು ರಾಜವಂಶಸ್ಥರಾಗಿದ್ದ ಮತ್ತು ಅಂದಿನ ಕೆಎಸ್‍ಸಿಎ ಅಧ್ಯಕ್ಷರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಅವರ ಕಲ್ಪನೆಯ ರೂಪವಾದ ಕೆಪಿಎಲ್ ಪಂದ್ಯಾವಳಿಗಳು 2009ರಿಂದ ಆಯೋಜನೆಯಾಗುತ್ತಾ ಬಂದಿದ್ದು, ಪ್ರಸಕ್ತ ವರ್ಷ ನಡೆಯುವುದು 5ನೇ ಆವೃತ್ತಿಯ ಪಂದ್ಯಾವಳಿಯಾಗಿದೆ. ಪ್ರತಿವರ್ಷ ಆಯೋಜನೆಯಾಗುತ್ತಿರುವ ಕೆಪಿಎಲ್ ಪಂದ್ಯಾವಳಿಗೆ ಒಡೆಯರ್ ಕೆಪಿಎಲ್ ಎಂದೇ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಾಮಕರಣ ಮಾಡಿದೆ.

Leave a Reply

comments

Related Articles

error: