ಕರ್ನಾಟಕಪ್ರಮುಖ ಸುದ್ದಿ

ಕಾವೇರಿ ನೀರಿನ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾದ ಮಂಡನೆ.!

ಪ್ರಮುಖ ಸುದ್ದಿ, ನವದೆಹಲಿ, ಜು.11: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.

ರಾಜ್ಯದ ಪರ ವಕೀಲ ನಾರಿಮನ್ ವಾದ ಮಂಡಿಸಿದರು. 1892, 1924 ರ ಹಳೆಯ ಒಪ್ಪಂದಗಳನ್ನು ಕರ್ನಾಟಕ ರಾಜ್ಯ ವಿರೋಧಿಸುತ್ತದೆ. ಮೈಸೂರು ರಾಜ್ಯದ ವೇಳೆ ನಡೆದ ಒಪ್ಪಂದಗಳು ಹಳೆಯ ಒಪ್ಪಂದಗಳು. ಈಗ ಅವು ಪ್ರಸುತ್ತವಾಗಿಲ್ಲ. ಮೈಸೂರು ಕರ್ನಾಟಕ‌ ರಾಜ್ಯವಾಗಿ ವಿಭಾಗವಾಗಿದೆ. ಈ ವೇಳೆ ಹಲವಾರು ಹೆಚ್ಚುವರಿ ಪ್ರದೇಶಗಳು ರಾಜ್ಯಕ್ಕೆ ಸೇರ್ಪಡೆಯಾಗಿದೆ. ಆ ಭಾಗದ ಎಲ್ಲ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸಬೇಕು.

ಹಳೆಯ ಒಪ್ಪಂದದಲ್ಲಿ ಬೆಂಗಳೂರನ್ನು ಪೂರ್ಣ ಪ್ರಮಾಣದಲ್ಲಿ ಪರಿಗಣಿಸಿಲ್ಲ. ಈಗ ಬೆಂಗಳೂರು ಅಭಿವೃದ್ಧಿಯಾಗಿದ್ದು ಸಾಕಷ್ಟು ಜನಸಂಖ್ಯೆ ಬೆಳವಣಿಗೆಯಾಗಿದೆ. ಬೆಂಗಳೂರಿಗೂ ಕುಡಿಯುವ ನೀರು ಬೇಕು. ಹೀಗಾಗಿ ಹೊಸ ಒಪ್ಪಂದ ರೂಪಿಸಿ, ನೀರಿನ‌ ಹಂಚಿಕೆ ಮಾಡಬೇಕು.  ಹೊಸ ಒಪ್ಪಂದ ರೂಪಿಸುವ ವೇಳೆ ಬೆಂಗಳೂರನ್ನು  ಪರಿಗಣಿಸಬೇಕು ಎಂದು ತಮ್ಮ ವಾದ ಮಂಡಿಸಿದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: