ಮೈಸೂರು

ವರುಣಾ ಕ್ಷೇತ್ರದ ಬಿ.ಜೆ.ಪಿ ಪ್ರಬಲ ಆಕಾಂಕ್ಷಿ ನಾನೆ: ಕಾ.ಪು.ಸಿದ್ದಲಿಂಗಸ್ವಾಮಿ

ಮೈಸೂರು, ಜು.12: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದ ಬಿ.ಜೆ.ಪಿ ಪ್ರಬಲ ಆಕಾಂಕ್ಷಿ ನಾನೆ ಎಂದು ಬಿ.ಜೆ.ಪಿ ಮುಖಂಡ ಕಾ.ಪು. ಸಿದ್ದಲಿಂಗಸ್ವಾಮಿ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ವೀರಶೈವ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜಿ.ಪಂ ವ್ಯಾಪ್ತಿಯ ಶಕ್ತಿ ಕೇಂದ್ರದ ಸಭೆಯಲ್ಲಿ ಭಾಗವಹಿಸಿ ಕಾಪು ಈ ಮಾತನ್ನುಹೇಳಿದರು. ವರುಣಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷಕ್ಕಾಗಿ ದುಡಿಯುತ್ತಿದ್ದು, ಈಗ ಪಕ್ಷ ಸದೃಢವಾಗಿದೆ. ಮರವೊಂದಕ್ಕೆ ನೀರೆರೆದು ಯಾವ ರೀತಿ ಗಿಡದಿಂದ ಮರವಾಗಿ ಬೆಳೆಸಿ. ಹಣ್ಣು ಬಿಡುವ ಹಂತಕ್ಕೆ ಬರುತ್ತದೆಯೋ ಅದೇ ರೀತಿ ಬಿ.ಜೆ.ಪಿ ಪಕ್ಷದ ಏಳಿಗೆಗೆ ನಾನು ಹಾಗೂ ಕಾರ್ಯಕರ್ತರು ಈ ಕ್ಷೇತ್ರದಲ್ಲಿ ಸಾಕಷ್ಟು ದುಡಿದಿದ್ದೇವೆ. ಕಳೆದ ಚುನಾವಣೆಯಲ್ಲಿ ‌50 ಸಾವಿರ ಮತಗಳನ್ನು ಪಡೆದಿದ್ದೇನೆ. ಪಕ್ಷದ ವರಿಷ್ಠರು ಇದನ್ನೆಲ್ಲ‌ ಗಮನಿಸುತ್ತಾರೆ. ಅವರೆ ತೀರ್ಮಾನ ಮಾಡುತ್ತಾರೆ ನಾನು ಕೂಡ ಒಬ್ಬ ಪ್ರಬಲವಾದ ಆಕಾಂಕ್ಷಿ ಅಭ್ಯರ್ಥಿ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು.  ಮನೆ-ಮನೆಗೆ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ಹಂಚಿ ಸಾಧನೆಯ ಬಗ್ಗೆ ಜನರಿಗೆ ಕಾರ್ಯಕರ್ತರು ಅರಿವು ಮೂಡಿಸುವ ಮೂಲಕ ಪಕ್ಷದ ಸಂಘಟನೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ವರುಣಾ ಕ್ಷೇತ್ರದ ವಿಸ್ತಾರಕರಾದ ಚಂದ್ರಕಲಾ ಬಾಯಿ, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಅಶೋಕ್, ಕುಂಬ್ರಳ್ಳಿ ಸುಬ್ಬಣ್ಣ, ತಾಂಡವಪುರದ ಸಂದೀಪ್, ಗಿರೀಶ್, ಚಿಕ್ಕಯ್ಯನ ಛತ್ರ ಸಿ.ಎನ್.ಚಂದ್ರು, ಹಳ್ಳಿಕರೆ ಹುಂಡಿ ಕೂಸಣ್ಣ, ಮರಳೂರು ಗೊದ್ದನಪುರ ರಾಜಶೇಖರ್, ಕಾರ್ತಿಕ್, ಹಾಗೂ ತಾಂಡವಪುರ ಜಿ.ಪಂ ವ್ಯಾಪ್ತಿಯ ಗ್ರಾಮಗಳ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: