ಪ್ರಮುಖ ಸುದ್ದಿ

ಭಾರತವನ್ನು ಸದಾ ತೆಗಳುತ್ತಿದ್ದ ಚೀನಾ ಮಾಧ್ಯಮ ಮೋದಿಯನ್ನು ಹೊಗಳಿದೆ..!

ಪ್ರಮುಖ ಸುದ್ದಿ, ಬೀಜಿಂಗ್, ಜು.೧೨: ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಚೀನಿ ಮಾಧ್ಯಮಗಳು ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಆಡಳಿತವನ್ನು ಕೊಂಡಾಡಿವೆ.
ಸಿಕ್ಕಿಂ ಗಡಿ ಡೋಕ್ಲಾಂ ಪ್ರದೇಶದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಯುದ್ಧದ ಭೀತಿಯೂ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ವಿರುದ್ಧ ಟೀಕೆಗೆ ಸೀಮಿತವಾಗಿದ್ದ ಚೀನಾ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆ ನರೇಂದ್ರ ಮೋದಿ ಆಡಳಿತವನ್ನು ಮೆಚ್ಚಿ ವರದಿ ಮಾಡಿದೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಏಕ ರೂಪ ಸರಕು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಜಾರಿಗೆ ತಂದಿರುವುದು ಐತಿಹಾಸಿಕ ನಡೆ ಎಂದು ಬಣ್ಣಿಸಿದ್ದು ಈ ಹಿರಿಮೆ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟಿದೆ.
ಚೀನಾದಿಂದ ಅತಿ ಕಡಿಮೆ ವೆಚ್ಚದ ತಯಾರಿಕಾ ಘಟಕಗಳು ನಿಧಾನವಾಗಿ ಹೊರ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಚೀನಾ ಸ್ಥಾನವನ್ನು ಭಾರತ ತುಂಬುವ ಸಾಧ್ಯತೆಗಳಿವೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಹೊಸ ತೆರಿಗೆ ನೀತಿ ಜಿಎಸ್‌ಟಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳಿಗೆ ಮತ್ತಷ್ಟು ಹುರುಪು ನೀಡುತ್ತದೆ. ಮೂಲ ಸೌಕರ್ಯಗಳ ಕೊರತೆ ಮತ್ತು ನೀತಿಗಳನ್ನು ಜಾರಿ ಮಾಡುವಲ್ಲಿ ರಾಜ್ಯಗಳ ನಡುವೆ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಸದ್ಯದ ಮಟ್ಟಿಗೆ ಈ ಸಮಸ್ಯೆ ಅಲ್ಪಮಟ್ಟದ್ದಾಗಿದ್ದು ಭಾರತ ಸರ್ಕಾರ ಇದನ್ನು ದಾಟಿ ಮುಂದೆ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. (ವರದಿ ಬಿ.ಎಂ)

Leave a Reply

comments

Related Articles

error: