ಕರ್ನಾಟಕ

ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ

ರಾಜ್ಯ(ಚಾಮರಾಜನಗರ)ಜು.12:-ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.
ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರು ಸಭೆ ನಡೆಸಿ ನಂತರ ಐಬಿ ರಸ್ತೆ, ಎಂ.ಜಿ.ಎಸ್.ವಿ ರಸ್ತೆ, ಗುರುಕಾರ್ ವೃತ್ತ, ಬಸ್‍ನಿಲ್ದಾಣ ರಸ್ತೆ, ಪ್ರಶಾಂತಿ ಲಾಡ್ಜ್ ರಸ್ತೆ, ಡಾ.ರಾಜ್‍ಕುಮಾರ್ ರಸ್ತೆಗಳಲ್ಲಿ ನೂರಾರು ರೈತರು ಮೆರವಣಿಗೆ ಮೂಲಕ ಚೆಸ್ಕಾಂನ ಕಾರ್ಯಪಾಲಕ ಇಂಜಿನಿಯರ ಕಛೇರಿಗೆ ತೆರಳಿ ಹಾಗೂ ಕುರುಬನ ಕಟ್ಟೆಯ ರಸ್ತೆಯಲ್ಲಿರುವ ನೀರಾವರಿ ಇಲಾಖೆಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರಕಾಶ್‍ಪಾಲ್ಯ, ಚಿಕ್ಕಲ್ಲೂರು, ಕುರುಬನಕಟ್ಟೆ ಹಾಗೂ ಜಕ್ಕಳ್ಳಿ ಫಡರ್‍ಗಳ ವ್ಯಾಪ್ತಿಯಲ್ಲಿ ವಾಸಿಸುವ ತೋಟದ ಮನೆಗಳಲ್ಲಿ ಸಿಂಗಲ್ ಫೀಸ್ ವಿದ್ಯುತ್ ಬದಲು ಸರ್ಮಪಕ ವಿದ್ಯುತ್‍ನ್ನು ನೀಡಬೇಕು. ರಾಮಪುರ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್‍ನ್ನು ನೀಡುವಂತೆ ಒತ್ತಾಯಿಸಿ ಎಇಇ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾಧ್ಯಕ್ಷ ಮಾಂಬಳ್ಳಿ ಮೋಹನಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಶಿವರಾಮ್, ತಾಲ್ಲೂಕು ಅಧ್ಯಕ್ಷ ಗೌಡೇಗೌಡ, ರೈತ ಮುಖಂಡರಾದ ಶ್ರೀಕಂಠಸ್ವಾಮಿ, ಬಸವರಾಜು, ರವಿನಾಯ್ಡು, ಪೊನ್ನುಸ್ವಾಮಿ, ಬಸರಾಜಪ್ಪ ಹಾಗೂ ನೂರಾರು ರೈತರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: