ಮೈಸೂರು

‘ಜಗದ ನಡೆ ಬುದ್ಧನ ಕಡೆ’:  600 ಮಂದಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

 ‘ಜಗದ ನಡೆ ಬುದ್ಧನ ಕಡೆ ಕಾರ್ಯಕ್ರಮದಡಿ ಶುಕ್ರವಾರದಂದು (ಅ.14) ಆರುನೂರು ಮಂದಿ ದಲಿತರು ಕುಟುಂಬ ಸಮೇತರಾಗಿ ರಾಜ್ಯಮಟ್ಟದ ದೀಕ್ಷಾ ಸಮಾವೇಶದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ನಗರದ ಬಲ್ಲಾಳ ಸರ್ಕಲ್ ಬಳಿಯಿರುವ ವಿಶ್ವಮೈತ್ರಿ ಬುದ್ಧವಿಹಾರ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧಧರ್ಮ ಸ್ವೀಕರಿಸಿದ 60ನೇ ವರ್ಷದ ಸ್ಮರಣಾರ್ಥ ‘ಜಗದೆಡೆ ಬುದ್ಧನ ಕಡೆ’ ಕಾರ್ಯಕ್ರಮದಲ್ಲಿ  ಬೌದ್ಧ ಧರ್ಮ ಗುರುಗಳು ಭೋಧಿಸಿದ ಬುದ್ಧನ ಪಂಚಶೀಲ ತತ್ವಗಳ ಭೋಧನೆ ಸ್ವೀಕಾರದಿಂದ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಸಮಾರಂಭವನ್ನು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಅರಳಿ ಗಿಡಕ್ಕೆ ನೀರೇರೆಯುವ ಮೂಲಕ ಉದ್ಘಾಟಿಸಿ, ಸಮಾಜದಲ್ಲಿ ಶೋಷಿತ ವರ್ಗವಾದ ದಲಿತರಿಗೊಂದು ಧರ್ಮದ ಅವಶ್ಯವಿದ್ದು ದಲಿತರು ಬೌದ್ಧ ಧರ್ಮ ಸ್ವೀಕಾರ ಮಾಡುವುದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಿದ್ದಾರೆ. ದೇಶದಲ್ಲಿ ಕಳೆದ ಐದು ಸಾವಿರ ವರ್ಷದಿಂದಲೂ ದಲಿತರಿಗೆ ಸಮಾನತೆಯ ಬದುಕು ಕಟ್ಟಿಕೊಳ್ಳುವ ಪೂರಕ ವಾತಾವರಣವೇ ಉಂಟಾಗಿಲ್ಲ. ಸ್ವಾಭಿಮಾನ ಸಮಾನತೆ ಸಾರುವ ಬೌದ್ಧ ಧರ್ಮಕ್ಕೆ ಎಲ್ಲಾ ದಲಿತರು ಸೇರ್ಪಡೆಯಾಗಲಿ ಎಂದು ಆಶಿಸಿದರು.

ವಿಶ್ವಮೈತ್ರಿ ಬುದ್ಧ ವಿಹಾರ ಆವರಣದಲ್ಲಿರುವ ಸರ್ಕಾರಿ ಸಮುದಾಯ ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸಿ ಬುದ್ಧ ವಿಹಾರ ವಿಸ್ತರಣೆಯ ಯೋಜನೆಯಿದ್ದು ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಾಗುವುದು ಎನ್ನುವ ಆಶ್ವಾಸನೆಯನ್ನು ಶ್ರೀನಿವಾಸ ಪ್ರಸಾದ್ ನೀಡಿದರು.

ಮೈಸೂರು ವಿವಿಯ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಗೌರವ ನಿರ್ದೇಶಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ.ಮಹಾಬೋಧಿ ಸೊಸೈಟಿ ಕಾರ್ಲ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಧಮ್ಯಲೋಕ ಬಂತೇಜಿ, ವಿಶ್ವಮೈತ್ರಿ ಬುದ್ಧವಿಹಾರದ ವೀರ್ಯಶೀಲ ಬಂತೇಜಿ, ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ.ವಸಂತಮ್ಮ, ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಗಾಯಕರಾದ ಲಕ್ಷ್ಮಿರಾಮ್, ದೇವಾನಂದರವರ ಪ್ರಸಾದ್, ಅಮ್ಮರಾಮಚಂದ್ರ ಬುದ್ಧನ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

Leave a Reply

comments

Related Articles

error: