ಪ್ರಮುಖ ಸುದ್ದಿಮೈಸೂರು

ನಗರದಲ್ಲಿ ವಿಜೃಂಭಣೆಯ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

valmikiಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆಯಂಗವಾಗಿ ಶನಿವಾರದಂದು ನಗರದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಮೆರವಣಿಗೆ ನಡೆಯಿತು.

ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮತ್ತು ಇತರ ಸಂಘಗಳ ಸಹಕಾರದಲ್ಲಿ ಆಯೋಜಿಸಲಾಗಿತ್ತು.

ಮೆರವಣಿಗೆಯನ್ನು ಶಾಸಕ ಜಿ.ಟಿ. ದೇವೇಗೌಡ, ಮೇಯರ್ ಬಿ.ಎಲ್. ಬೈರಪ್ಪ, ಉಪ ಮೇಯರ್ ವನಿತಾ ಪ್ರಸನ್ನ, ಸಂಸದ ಪ್ರತಾಪ್ ಸಿಂಹ, ಶಾಸಕ ಸೋಮಶೇಖರ್ ಮತ್ತು ಇತರರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ವಿವಿಧ ಕಲಾತಂಡಗಳು ಕೋಲಾಟ, ಪೂಜಾಕುಣಿತ, ನಂದಿ ಕಂಬ, ಕಂಸಾಳೆ ಪ್ರದರ್ಶಿಸಿದರು. ಕೆ.ಆರ್. ಸರ್ಕಲ್, ಡಿ.ದೇವರಾಜು ಅರಸ್ ರಸ್ತೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸರ್ಕಲ್, ವಿನೋಬಾ ರಸ್ತೆ ಮಾರ್ಗದಲ್ಲಿ ಮೆರವಣಿಗೆ ನಡೆಯಿತು. ಶಾಸಕ ಜಿ.ಟಿ. ದೇವೇಗೌಡ ಕಲಾವಿದರೊಂದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಕಲಾಮಂದಿರದಲ್ಲಿ ಕೊನೆಗೊಂಡಿತು.

ವಾಲ್ಮೀಕಿ ಜನ್ಮದಿನವನ್ನು ಜಿಜೆಪಿ, ಜೆಡಿಎಸ್ ಪಕ್ಷದ ಕಚೇರಿ ಮತ್ತು ವಿವಿಧ ಸಂಘಸಂಸ್ಥೆಗಳು ಆಚರಿಸಿದವು.

valmiki-2

Leave a Reply

comments

Related Articles

error: