ಮೈಸೂರು

ಜು.14ರಂದು ವೈದ್ಯರ ದಿನಾಚರಣೆ

ಮೈಸೂರು,ಜು.12 : ಜು.14 ಸಂಜೆ 7ಕ್ಕೆ ಜೆ.ಕೆ.ಮೈದಾನದ ಅಮೃತ ಭವನದಲ್ಲಿ ವೈದ್ಯರ ದಿನಾಚರಣೆಯನ್ನು ಮೈಸೂರು ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಶಿಕ್ಷಕರ ಸಂಘ ಸಂಯುಕ್ತವಾಗಿ ಹಮ್ಮಿಕೊಂಡಿದೆ.

ಡಾ.ಹೆಚ್.ಟಿ. ಚಿದಾನಂದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ರಣದೀಪ್, ಪೊಲೀಸ್ ಕಮಿಷನರ್ ಡಾ.ಎ.ಸುಬ್ರಮಣೇಶ್ವರ ರಾವ್, ಮುಡಾ ಆಯುಕ್ತ ಡಾ.ಎಂ.ಮಹೇಶ್, ಡಾ.ಬಿ.ಕೃಷ್ಣಮೂರ್ತಿ, ಡಾ.ಜಿ.ಆರ್.ಜಗನ್ನಾಥ್ ಬಾಬು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ‘ಮಾ’ ಮತ್ತು ಬೋಧಕ ಸಂಘದ ಸದಸ್ಯರು ಜು.13ರೊಳಗೆ ನೋಂದಣಿ ಮಾಡಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2428258 ಅನ್ನು ಸಂಪರ್ಕಿಸಿ.  (ಕೆ.ಎಂ.ಆರ್)

Leave a Reply

comments

Related Articles

error: