ಮೈಸೂರು

ಮಹಾರಾಜ ಹೈಸ್ಕೂಲ್ ಮತ್ತು ಕಾಲೇಜು ನವೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಜು.12 : ಮಹಾರಾಜ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಕಟ್ಟಡದ ಅವ್ಯವಸ್ಥೆಯನ್ನು ಖಂಡಿಸಿ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀಧರ ರಾಜೇ ಅರಸ್ ಅವರು ಜು.14ರಂದು ಬೆಳಿಗ್ಗೆ 7ಗಂಟೆಯಿಂದ ಕಾಲೇಜಿನ ಮಹಾರಾಜ ಮುಮ್ಮಡಿಯವರ ಪುತ್ಥಳಿಯ ಮುಂದೆ ಧರಣಿ ನಡೆಸಲಿದ್ದಾರೆ.

1833ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಪ್ರಾರಂಭಗೊಂಡ ಕಾಲೇಜು ಸುಮಾರು 175 ವರ್ಷಗಳು ಪೂರೈಸಿದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಕಾಲೇಜಿನಿಂದ ಇದೇ ಜು.14ರಂದು ಕಾಲೇಜು ಸಂಸ್ಥಾಪಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಆದರೆ ವಾಸ್ತವದಲ್ಲಿ ಕಾಲೇಜು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ ಹಾಗೂ ಕಾಂಪೌಂಡು ಮುರಿದು ಬಿದ್ದು ಸುಣ್ಣ ಬಣ್ಣವಿಲ್ಲದೆ ಹಾಳು ಹೊಡೆಯುತ್ತಿದೆ. ಇಂತಹ ಪಾರಂಪರಿಕ ಶಿಥಿಲಗೊಂಡ ಕಟ್ಟಡದಲ್ಲಿ ಸಂಭ್ರಮಾಚರಣೆ ನಡೆಸುವುದಾದರು ಹೇಗೆ ಎಂದು ಪ್ರಶ್ನಿಸಿರುವ ಅವರು ಇದನ್ನು ಖಂಡಿಸಿ ಹಾಗೂ ನವೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಳೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ನೀಡಬೇಕೆಂದು ಶ್ರೀಧರ್ ರಾಜ್ ಅರಸ್ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: