
ಮೈಸೂರು
ಮಿಸಸ್ ಇಂಡಿಯಾ-2017 ಎಲೆಗೆಂಟ್ಗೆ ನಿವೇದಿತಾ ಆಯ್ಕೆ
ಮೈಸೂರು, ಜು.೧೨: ಮೈಸೂರಿನ ನಿವೇದಿತಾ ಎಂಬುವರು ಪ್ರತಿಷ್ಟಿತ ಸೌಂದರ್ಯ ಸ್ಪರ್ಧೆ ಮಿಸಸ್ ಇಂಡಿಯಾ ಎಲೆಗೆಂಟ್೨೦೧೭ಗೆ ಆಯ್ಕೆಯಾಗಿ ಸಾಧನೆಗೈದಿದ್ದಾರೆ.
ಜಿಯಾ ಫಿಲಂ ಅಂಡ್ ಫ್ಯಾಷನ್ ಇವೆಂಟ್ಸ್ ಸಂಸ್ಥೆ ವಿವಾಹಿತ ಮಹಿಳೆಯರಿಗಾಗಿ ನಡೆಸುವ ಈ ಸೌಂದರ್ಯ ಸ್ಪರ್ಧೆ ಇದೇ ತಿಂಗಳು ಜು.೨೩ರಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆಯಲಿದ್ದು ನಿವೇದಿಯ ಭಾಗವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ೧೬ ಮಹಿಳೆಯರು ಆಯ್ಕೆಯಾಗಿದ್ದು, ನಿವೇದಿತಾ ಮೈಸೂರಿನಿಂದ ಆಯ್ಕೆಯಾಗಿರುವ ಏಕೈಕ ಮಹಿಳೆಯಾಗಿದ್ದು ಅತ್ಯಂತ ಚಿಕ್ಕ ವಯಸ್ಸಿನ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ೨೭ವರ್ಷದ ನಿವೇದಿತಾ, ಉದ್ಯಮಿ ಹರ್ಷ ನಟರಾಜ್ ಅವರೊಂದಿಗೆ ವಿವಾಹವಾಗಿದ್ದಾರೆ. ಆನ್ಲೈನ್ ಮೂಲಕ ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಿ, ಬೆಂಗಳೂರಿನಲ್ಲಿ ನಡೆದಿದ್ದ ಆಡಿಷನ್ನಲ್ಲಿ ಪಾಲ್ಗೊಂಡಿದ್ದರು. ದೇಶಾದ್ಯಂತ ಸುಮಾರು ೫೦೦ಕ್ಕೂ ಹೆಚ್ಚು ಮಹಿಳೆಯರು ಆಡಿಷನ್ನಲ್ಲಿ ಭಾಗವಹಿಸಿದ್ದರು. ಆಯೋಜಕರು ಪ್ರಮುಖವಾಗಿ ೧೬ ಮಹಿಳೆಯರನ್ನು ಫೈನಲ್ಸ್ಗೆ ಆಯ್ಕೆ ಮಾಡಿದ್ದು, ದಕ್ಷಿಣ ಭಾರತದಿಂದ ನಿವೇದಿತಾ ಹಾಗೂ ಕೇರಳಾ ಮೂಲದ ಮತ್ತೊಬ್ಬ ಮಹಿಳೆ ಮಾತ್ರ ಆಯ್ಕೆಯಾಗಿದ್ದಾರೆ.
ಅಂತಾರಾಷ್ಟ್ರೀಯ ರ್ಯಾಲಿ ಪಟು: ನಿವೇದಿತಾ, ಹರ್ಷ ದಂಪತಿಗಳಿಬ್ಬರು ಅಂತರಾಷ್ಟ್ರೀಯ ರ್ಯಾಲಿ ಪಟುಗಳಾಗಿದ್ದು, ರ್ಯಾಲಿ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಪ್ರತಿಷ್ಟಿತ ಅಂತರಾಷ್ಟ್ರೀಯ ಐಎಎನ್ಎಸ್ಸಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ, ಹೈದರಾಬಾದ್, ಮುಂಬೈ ಮುಂತಾದ ರಾಜ್ಯಗಳಲ್ಲಿ ನಡೆಯುವ ರ್ಯಾಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. (ವರದಿ ಬಿ.ಎಂ)