ಮೈಸೂರು

ಐದು ಮಂದಿ ದರೋಡೆಕೋರರ ಬಂಧನ

ಮೈಸೂರು,ಜು.12:- ಮೈಸೂರು ಜಿಲ್ಲೆ ಕೆ.ಆರ್.ನಗರ ಪೊಲೀಸರು ಯಶಸ್ವೀ ಕಾರ್ಯಾಚರಣೆ ನಡೆಸಿ ಐದು ಮಂದಿ ದರೋಡೆಕೋರರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸುಧೀರ್, ಪ್ರವೀಣ್ ಕುಮಾರ್, ಪ್ರೇಂಕುಮಾರ್, ಅಭಿಜಿತ್ ಹಾಗೂ ಪ್ರಶಾಂತ್  ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಕೆ.ಆರ್.ನಗರ ಪಟ್ಟಣದ ತೋಪಮ್ಮ ದೇವಸ್ಥಾನದ ಬಳಿ ಕೊರಿಯರ್ ಸಂಸ್ಥೆಗೆ ಸೇರಿದ ವಾಹನವನ್ನು ಅಡ್ಡಗಟ್ಟಿ 3.5 ಲಕ್ಷ ರೂಪಾಯಿ ಮೌಲ್ಯದ ಪದಾರ್ಥಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಬಂಧಿತರಿಂದ  ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ಪದಾರ್ಥಗಳು ವಶಪಡಿಸಿಕೊಳ್ಳಲಾಗಿದೆ. ಐವರು ಆರೋಪಿಗಳ ಪೈಕಿ, ಮೂವರು ಕೊರಿಯರ್ ಸಂಸ್ಥೆಯ ಮಾಜಿ ನೌಕರರು ಎನ್ನಲಾಗಿದೆ. ಆರೋಪಿಗಳ ಪತ್ತೆಗಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ಸಂಬಂಧ ಕೆ.ಆರ್. ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: