ಮೈಸೂರು

ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರೇ ಸಾಕ್ಷಿ: ಸಿ.ಹೆಚ್.ವಿಜಯಶಂಕರ್

ಮಹರ್ಷಿ ವಾಲ್ಮೀಕಿ ಕೇರಳದಲ್ಲಿ ಹುಟ್ಟಿದರೂ ಜಗತ್ತಿಗೇ ಮಾದರಿಯಾಗಬಲ್ಲ ರಾಮಾಯಣ ಗ್ರಂಥ ರಚಿಸಿ ಎಲ್ಲರಿಗೂ ಆದರ್ಶಪ್ರಿಯರಾಗಿದ್ದಾರೆ ಎಂದು ಸಿ.ಹೆಚ್.ವಿಜಯಶಂಕರ್ ತಿಳಿಸಿದರು.

ನಗರದ ಇಟ್ಟಿಗೆಗೂಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿಯ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರೇ ಸಾಕ್ಷಿ. ತಮ್ಮ ಅಗಾಧ ಪ್ರತಿಭೆಯಿಂದ ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ಒಂದಾದ ರಾಮಾಯಣ ರಚಿಸಿ ಸಮಾಜಕ್ಕೆ ಮಹಾನ್ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶಗಳು ಎಲ್ಲರಿಗೂ ಸ್ಫೂರ್ತಿ. ಆದರೆ, ಇಂದು ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗುತ್ತಿದ್ದು, ಒಂದು ಜಾತಿಗೆ ಸಮೀಕರಣಗೊಳಿಸಲಾಗುತ್ತಿದೆ. ವಾಲ್ಮೀಕಿ ಅವರು ಎಲ್ಲವನ್ನೂ ಮೀರಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಆದರ್ಶಮಯ ಜೀವನವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಹೆಚ್.ವಿ.ರಾಜೀವ್, ನಗರಾಧ್ಯಕ್ಷ ಮಂಜುನಾಥ್, ಉಪ ಮೇಯರ್ ವನಿತಾ ಪ್ರಸನ್ನ, ಯಶಸ್ವಿನಿ ಸೋಮಶೇಖರ್, ಬಿ.ಪಿ.ಮಂಜುನಾಥ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

Leave a Reply

comments

Related Articles

error: