ಮೈಸೂರು

ಡೆಂಗ್ಯೂಗೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ

ಮೈಸೂರು,ಜು.12:- ಮೈಸೂರಲ್ಲಿ ಡೆಂಗ್ಯೂ ಆರ್ಭಟ ಹೆಚ್ಚಾಗಿದ್ದು, ಡೆಂಗ್ಯೂ ನರ್ತನಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಬಲಿಯಾಗಿದ್ದಾನೆ.

ಮೃತನನ್ನು ಮಂಡ್ಯ‌ ಜಿಲ್ಲೆ ಪಾಂಡವಪುರ ಪಟ್ಟಣ ನಿವಾಸಿ ಮಂಜು(19) ಎಂದು ಗುರುತಿಸಲಾಗಿದೆ.  ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.  ಜ್ವರದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇದೀಗ ಮೈಸೂರಲ್ಲಿ  ಡೆಂಗ್ಯೂಗೆ  8 ಜನ ಸಾವನ್ನಪ್ಪಿದ್ದಾರೆ. ಜನತೆಯಲ್ಲಿ‌ ಮತ್ತಷ್ಟು ಆತಂಕ ಹೆಚ್ಚಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: