ಮನರಂಜನೆ

ಶಿಲ್ಪಾ ಬರ್ತಡೇಗೆ ಮುಗುಳುನಗೆ ಚಿತ್ರದ ಮತ್ತೊಂದು ಹಾಡು ರಿಲೀಸ್‍

ಬೆಂಗಳೂರು,ಜುಲೈ.13: ಗೋಲ್ಡನ್‍ ಸ್ಟಾರ್‍ ಗಣೇಶ್‍ ಅಭಿನಯದ  ‘ಮುಗುಳುನಗೆ’ ಚಿತ್ರದ ಮತ್ತೊಂದು ಹಾಡಿನ ಮೇಕಿಂಗ್‌ ಹಾಗೂ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇತ್ತೀಚೆಗಷ್ಟೆ  ‘ಮುಗುಳುನಗೆ’ ಚಿತ್ರದ ಹೊಡಿ ಒಂಬತ್ತ್ ಹಾಡನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿತ್ತು. ಬುಧವಾರ ಗೋಲ್ಡನ್‍ ಸ್ಟಾರ್‍ ಗಣೇಶ್‍ ಪತ್ನಿ ಶಿಲ್ಪಾ ಬರ್ತಡೇಗೆ’ಮುಗುಳುನಗೆ’ ಚಿತ್ರದ ‘ರೂಪಸಿ ನಿನ್ನ’  ಎಂಬ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ.  ಜಯಂತ ಕಾಯ್ಕಿಣಿ ಅವರು ರಚಿಸಿರುವ, ವಿ. ಹರಿಕೃಷ್ಣ ಸಂಗೀತ ಸಂಯೋಜನೆಯ ಸೋನು ನಿಗಮ್‌ ಅವರ ಮಧುರ ಮೆಲೋಡಿ ಕಂಠದಲ್ಲಿ  ‘ರೂಪಸಿ ನಿನ್ನ’ ಆಗಿ ಮೂಡಿ ಬಂದಿದೆ. ಇದೇ ವೇಳೆ ಶಿಲ್ಪಾ ಗಣೇಶ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಬಿ ಸುರೇಶ್, ಗಣೇಶ್, ನಟಿ ನಿಖಿತ ನಾರಾಯಣ್ ಸೇರಿದಂತೆ ಹಲವರು ಹಾಜರಿದ್ದರು.( ವರದಿ: ಪಿ.ಜೆ )

Leave a Reply

comments

Related Articles

error: