ಮೈಸೂರು

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಜನಜಾಗೃತಿ ಅಭಿಯಾನ ಅ.18ರಂದು

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸರ್ಕಾರಿ ಕಚೇರಿಗಳಲ್ಲಿನ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಅದನ್ನು ಎದುರಿಸಲು ಸಾರ್ವಜನಿಕವಾಗಿ ಅಗತ್ಯವಾಗಿ ಬೇಕಾದ ‘ಸಕಾಲ’ ಮತ್ತು ಮಾಹಿತಿ ಹಕ್ಕು ಕಾಯ್ದೆ’ ಯ ಬಗ್ಗೆ ಮಾಹಿತಿ, ತರಬೇತಿ, ಕಾರ್ಯಾಗಾರಗಳನ್ನು ಏರ್ಪಡಿಸಲು ಮತ್ತು ಇನ್ನಿತರ ಜನಜಾಗೃತಿ ಕಾರ್ಯಗಳನ್ನು ಮಾಡಲು ಜನಜಾಗೃತಿ ಅಭಿಯಾನವನ್ನು ಕೈಗೊಂಡಿದೆ ಎಂದು ಮಂಡ್ಯ ಜಿಲ್ಲಾ ಕಾರ್ಯದರ್ಶಿ ಚಿಕ್ಕಣ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ಅಧ್ಯಕ್ಷ ರವಿ ಕೃಷ್ಣರೆಡ್ಡಿ ಅವರ ನೇತೃತ್ವದಲ್ಲಿ ಅ.18 ರ ಬೆ.10.30 ಕ್ಕೆ ಮೈಸೂರು ತಾಲೂಕು ಕಚೇರಿ ಆವರಣದಲ್ಲಿ “ಲಂಚಮುಕ್ತ ಮೈಸೂರು ಜನಜಾಗೃತಿ ಅಭಿಯಾನ” ಹಾಗೂ ಮ. 2 ಗಂಟೆಗೆ ನಜರಾಬಾದ್ ನ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ  “ ಸಕಾಲ ಮತ್ತು ಮಾಹಿತಿ ಹಕ್ಕು ಕಾಯ್ದೆ ತರಬೇತಿ ಶಿಬಿರ” ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಿಕ್ಕಲ್ಲಿ ವೇದಿಕೆಯ ಸಹಾಯವಾಣಿ 8884277730 ಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.  ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಸಹ ಸಂಚಾಲಕರಾದ ಬಸವರಾಜ್ ಕಾಗೆ ಮತ್ತು ಶಿವಾನಂದ್, ಹಾಗೂ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ದೊಡ್ಡಮನಿ ಹಾಜರಿದ್ದರು.

Leave a Reply

comments

Related Articles

error: