ಮನರಂಜನೆ

ನ್ಯೂಯಾರ್ಕ್ ಸುತ್ತಾಟದಲ್ಲಿ ಅನುಷ್ಕಾ-ವಿರಾಟ್ ಕೊಹ್ಲಿ

ಮುಂಬೈ, ಜು.13: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಈಗ  ನ್ಯೂಯಾರ್ಕ್ ನಲ್ಲಿ  ಸುತ್ತುತ್ತಿದ್ದಾರೆ. ಜುಲೈ 15 ರಂದು ಸಂಜೆ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಐಫಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು  ಇಬ್ಬರು ಆಗಮಿಸಿದ್ದಾರೆ.

ಇಬ್ಬರೂ ಜೊತೆಯಾಗಿ ಓಡಾಡ್ತಾ ಇರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ವಿಶೇಷ ಅಂದ್ರೆ ಕೊಹ್ಲಿ-ಅನುಷ್ಕಾ ಇಬ್ಬರೂ ಮ್ಯಾಚಿಂಗ್ ಡ್ರೆಸ್ ಧರಿಸಿದ್ದಾರೆ.

ಸದ್ಯ ಅನುಷ್ಕಾ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರು. ಈ ಚಿತ್ರ ಆಗಸ್ಟ್ 4 ಕ್ಕೆ ರಿಲೀಸ್ ಆಗಲಿದೆ. ಜುಲೈ 26 ರಿಂದ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿ ಆರಂಭವಾಗುತ್ತಿದ್ದು, ಕೊಹ್ಲಿ ಕೂಡ ಅಭ್ಯಾಸಕ್ಕೆ ಇಳಿಯಬೇಕಿದೆ. ಅದಕ್ಕೂ ಮುನ್ನ ಕೊಂಚ ರಿಲ್ಯಾಕ್ಸ್ ಮಾಡೋಣ ಅಂದ್ಕೊಂಡು ಪ್ರೇಮಿಗಳು ನ್ಯೂಯಾರ್ಕ್ ಗೆ ಬಂದಿಳಿದಿದ್ದಾರೆ. (ವರದಿ: ಎಲ್.ಜಿ)

Leave a Reply

comments

Related Articles

error: