ಮೈಸೂರು

‘ಹರಿಭಕ್ತ ಸುಧನ್ವ’ ಯಕ್ಷಗಾನ ಪ್ರದರ್ಶನ ಅ.16ರಂದು

ಶ್ರೀ ಗುರುಗಣಪತಿ ಯಕ್ಷಗಾನ ಮಂಡಳಿಯು ಅ.16 ರ ಸಂಜೆ 6 ಗಂಟೆಗೆ ಗಾನಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ‘ಹರಿಭಕ್ತ ಸುಧನ್ವ’ ಎಂಬ  ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಿದೆ ಎಂದು ಮಂಡಳಿಯ ಕಾರ್ಯದರ್ಶಿ ಸಿ.ವಿ.ರವೀಂದ್ರ ಹೆಗಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮವನ್ನು ಮೈಸೂರಿನ ಪ್ರಖ್ಯಾತ ನೃತ್ಯಗುರು ವಿದುಷಿ ನಂದಿನಿ ಈಶ್ವರ್ ಉದ್ಘಾಟಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ವೇಣುಗೋಪಾಲ, ಮದ್ದಲೆಯಲ್ಲಿ ಪದ್ಮನಾಭ ಜೈನ್, ಚಂಡೆಯಲ್ಲಿ ಧನಂಜಯ, ಮುಮ್ಮೇಳದಲ್ಲಿ ರವೀಂದ್ರ ಹೆಗಡೆ, ಎಲ್.ಎನ್.ಹೆಗಡೆ, ಜಯರಾಂ ಹೆಗಡೆ, ಲಂಬೋದರ ಹೆಗಡೆ, ಶಿವರಾಂ ಭಟ್, ನಾಗರಾಜ ಜೋಶಿ, ಚನ್ನಕೇಶವ, ಸಿಂಧು, ವಿನೀತ್ ಹೆಗಡೆ ಮತ್ತು ಸ್ಕಂದಪ್ರಸಾದ್ ಭಾಗವಹಿಸಲಿದ್ದಾರೆ. ಡಾ.ಪುಂಡಲೀಕ ಹೆರಳೆ ಕಾರ್ಯಕ್ರಮದ ಪ್ರಾಯೋಜಕರಾಗಿರುತ್ತಾರೆ. ಮತ್ತು ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಸದಸ್ಯ ಶಿವರಾಂ ಭಟ್ ಹಾಜರಿದ್ದರು.

Leave a Reply

comments

Related Articles

error: