ಮೈಸೂರು

ಮನೆಯವರು ಒಪ್ಪುತ್ತಿಲ್ಲವೆಂಬ ಕಾರಣಕ್ಕೆ ಮೊದಲ ಪತ್ನಿಗೆ ಕೈಕೊಟ್ಟು ಮರುಮದುವೆಯಾದ ಭೂಪನಿಗೆ ಪೊಲೀಸರ ಆತಿಥ್ಯ

ಮೈಸೂರು,ಜು.13:- ಕೋಲಾರದಲ್ಲಿ ಯುವತಿಯೋರ್ವಳನ್ನು ಮದುವೆಯಾಗಿ ಮನೆಯವರು ನಿನ್ನನ್ನು ಒಪ್ಪಲ್ಲ ಎಂಬ ಕಾರಣ ನೀಡಿ, ಮರುಮದುವೆಯಾದ ಭೂಪನೀಗ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿಕ್ಕ ಅಂಕಂಡಹಳ್ಳಿಯ ಲೋಕೇಶ್ ಮತ್ತು ಗಾಂಧಿನಗರದ ನಿವಾಸಿ ನೇತ್ರ ಎಂಬುವವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಆಗಸ್ಟ 29ರಂದು ದೊಡ್ಡ ಶಿವಾರ ಎಂಬಲ್ಲಿನ ಶಿವ ದೇವಾಲಯದಲ್ಲಿ ಗುಟ್ಟಾಗಿ ಮದುವೆಯಾಗಿದ್ದು ಅನಂತರ ಮನೆಯವರು ಒಪ್ಪುತ್ತಿಲ್ಲವೆಂದು ನೇತ್ರಳಿಗೆ ವಂಚಿಸಿದ್ದಾನೆ . ಇದರಿಂದ ನೇತ್ರ ನ್ಯಾಯಕ್ಕಾಗಿ ಆತನ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ. ವಿಷಯ ತಿಳಿದ ಆತನ ಮನೆಯವರು ಮನೆಗೆ ಬೀಗ ಜಡಿದು ಪರಾರಿಯಗಿದ್ದು ನಂಜನಗೂಡಿನ ತನ್ನ ಸಂಬಂಧಿ ಮನೆಯಲ್ಲಿ ಲೋಕೇಶ್ ಪತ್ತೆಯಾಗಿದ್ದಾನೆ. ಈತ ಮೈಸೂರು ಮೂಲದ ಯುವತಿಯನ್ನು ಸಹ  ಪುಸಲಾಯಿಸಿ ಮರು ಮದುವೆಯಾಗಿದ್ದು ಈಗ ನಂಜನಗೂಡು ಪೊಲೀಸರ ಅಥಿತಿಯಾಗಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: