ಲೈಫ್ & ಸ್ಟೈಲ್

ಪುದೀನ ಸೊಪ್ಪಲ್ಲಡಗಿದೆ ಆರೋಗ್ಯದ ಹಲವು ರಹಸ್ಯ

ಸಾಮಾನ್ಯವಾಗಿ ಬಂದು ಹೋಗುವ ಖಾಯಿಲೆಗಳಿಗೆ ಮನೆಯಲ್ಲಿಯೇ ಮದ್ದನ್ನು ಮಾಡಿಕೊಳ್ಳಬಹುದು.  ಪುದೀನ ಸೊಪ್ಪನ್ನು  ಸೇವಿಸಿದರೆ  ಅಜೀರ್ಣ, ಹೊಟ್ಟೆ ಉಬ್ಬರ, ನೆಗಡಿ, ಶೀತ, ಫ್ಲೂ, ಕೆಮ್ಮು, ಗಂಟಲು ನೋವು ಹಾಗೂ ವೈರಾಣು ಸೋಂಕು ಜ್ವರಗಳು ದೂರವಾಗುತ್ತದೆ.

  • ರಕ್ತವನ್ನು ಶುದ್ಧಿಗೊಳಿಸುವುದರಲ್ಲಿ ಇದರ ಪಾತ್ರ ಅಪಾರವಾದ್ದು.
  • ಗಂಟಲು ಒಡೆದಿದ್ದಾಗ ಪುದೀನ ಸೊಪ್ಪಿನ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ  ಮುಕ್ಕಳಿಸಿದರೆ ಉತ್ತಮ ಪರಿಹಾರ ಕಂಡುಬರುತ್ತದೆ. ಭಾಷಣಕಾರರಿಗೆ, ಸಂಗೀತಗಾರರಿಗೆ, ಶಿಕ್ಷಕ/ಉಪನ್ಯಾಸಕರಿಗೆ ಒಂದು ವರಪ್ರಸಾದ ಎಂದರು ತಪ್ಪಾಗಲಾರದು.
  • ಪುದೀನ ಸೊಪ್ಪು/ರಸ ಸೇವನೆಯಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಜೀರ್ಣಶಕ್ತಿ ಹೆಚ್ಚಾಗುತ್ತದೆ.
  • ಪುದೀನ ಎಲೆ ತಿನ್ನುವುದರಿಂದ ನಾಲಿಗೆ ರುಚಿ ಗ್ರಹಣ ಶಕ್ತಿ ಹೆಚ್ಚಾಗುತ್ತದೆ.

ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿದಿನವೂ ನಾಲ್ಕೈದು ಪುದೀನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ದೂರ ಮಾಡುತ್ತದೆ.

ಪುದೀನದಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತದೆ.

ದಂತ ಕ್ಷಯ ತಪ್ಪಿ ಹಲ್ಲುಗಳು ದೀರ್ಘಕಾಲ ಬಾಳಿಕೆ ಬರುತ್ತವೆ.

ಅಲ್ದೆಲ ಪುದೀನ ಸೊಪ್ಪನ್ನು ಸೇವನೆ ಮಾಡುವುದರಿಂದ ಫಿಟ್‍ನೆಟ್‍ ಕಾಪಾಡಿಕೊಳ್ಳಬಹುದು.

ನೀವು ಕೆಮ್ಮಿನಿಂದ ಬಳಲುತ್ತಿದ್ದರೆ, ನೀರನ್ನು ಬೆಚ್ಚಗೆ ಬೆರೆಸಲು ಪುದೀನ ಸೊಪ್ಪನ್ನು ಹಾಕಿ ಅದರ ಶಾಖವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಗಂಟಲು ಮತ್ತು ಮೂಗುಗಳ ಮೂಲಕ ಹಾದು ಹೋಗುತ್ತದೆ.

ಟೊಮೊಟೊ, ಈರುಳ್ಳಿ, ಸೌತೇಕಾಯಿ ಹೆಚ್ಚಿಹೋಳು ಮಾಡಿ, ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಇದರೊಂದಿಗೆ ಬೆರೆಸಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ ಪ್ರತಿದಿನ ಬಳಸಿದರೆ, ಇದು ಆರೋಗ್ಯ ವರ್ಧಕ ಕೋಸುಂಬರಿಯಾಗುತ್ತದೆ. ( ಪಿ.ಜೆ )

Leave a Reply

comments

Related Articles

error: