ಮೈಸೂರು

ಕೆ.ಎಸ್.ಈಶ್ವರಪ್ಪ ಪಿಎ ಅಪಹರಣ ಪ್ರಕರಣಕ್ಕೆ ಮಹತ್ವದ ತಿರುವು

ಮೈಸೂರು,ಜು.13:-ವಿಧಾನಪರಿಷತ್ ವಿಪಕ್ಷನಾಯಕ ಕೆ.ಎಸ್.ಈಶ್ವರಪ್ಪ ಪಿಎ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ದೊರಕಿದ್ದು, ಬೆಂಗಳೂರಿನ ರೌಡಿಶೀಟರ್ ಓರ್ವನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

ಮೈಸೂರಿನ ಚಾಮುಂಡಿಬೆಟ್ಟದ ಪಾದದ ಬಳಿ ರೌಡಿಶೀಟರ್ ಪ್ರಶಾಂತ್ ಎಂಬಾತನನ್ನು ಇನ್ಸಪೆಕ್ಟರ್ ಸಾದಿಕ್ ಪಾಷಾ, ಡಿಸಿಪಿ ನಾರಾಯಣ್ ನೇತೃತ್ವದ ತಂಡ ಬಂಧಿಸಿದೆ. ಯಾವುದೋ ಮಹತ್ವದ ಸಿಡಿ ಪಡೆಯಲು ಅವರನ್ನು ಅಪಹರಣ ಮಾಡಲಾಗಿತ್ತು ಎನ್ನಲಾಗುತ್ತಿದೆ. ಇದೀಗ ರೌಡಿಶೀಟರ್ ಪ್ರಶಾಂತ್ ನನ್ನು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿ ವಿಚಾರಣೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: