ಮೈಸೂರು

‘ಕಂಪ್ಯೂಟರ್ ತರಬೇತುದಾರ’ನಿಗಾಗಿ ತೀವ್ರ ಶೋಧ

ಮನೆಯಲ್ಲೇ ಕಂಪ್ಯೂಟರ್ ತರಬೇತಿ ನೀಡುವುದಾಗಿ ಹೇಳಿ ಮನೆಗಳಿಂದ ಕಂಪ್ಯೂಟರ್‍ಗಳನ್ನು ಕದ್ದು ಪರಾರಿಯಾದವನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಈತ ಕಂಪ್ಯೂಟರ್ ತರಬೇತಿ ನೀಡುತ್ತೇನೆಂದು ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಿದ್ದ. ಮೈಸೂರಿನ ರಾಮಕೃಷ್ಣನಗರದಲ್ಲಿ ಹಲವರಿಗೆ ಮೂರು ದಿನ ತರಬೇತಿ ನೀಡಿ, ಕಂಪ್ಯೂಟರ್ ರಿಪೇರಿ ಮಾಡಿಸುವುದಾಗಿ ಹೇಳಿ ಕಂಪ್ಯೂಟರ್‍ನೊಂದಿಗೆ ಪರಾರಿಯಾಗಿದ್ದಾನೆ. ಕಂಗಾಲಾದ ಶಿಬಿರಾರ್ಥಿಗಳು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.

Leave a Reply

comments

Related Articles

error: