
ಮೈಸೂರು,ಜು.13 : ಮೈಸೂರು ಕ್ಯಾನ್ ವಾಸ್ ಸಂಸ್ಥೆ ನಿರ್ಮಿಸಿರುವ ವೈಷ್ಣವಿ ಕನ್ನಡ ಚಲನಚಿತ್ರವನ್ನು ಇದೇ ಜು.14ರ ಸಂಜೆ 4ಕ್ಕೆ ಜಯಲಕ್ಷ್ಮೀಪುರಂ ಡಿಆರ್ ಸಿಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ನಿರ್ಮಾಪಕ ಎಸ್.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ ಅವ್ಯವಸ್ಥೆಯನ್ನು ಬಿಂಭಿಸುವ ಉತ್ತಮ ಸಂದೇಶ ಸಾರುವ ‘ವೈಷ್ಣವಿ’ ನಾಯಕಿ ಪ್ರಧಾನ ಚಲನಚಿತ್ರವಾಗಿದೆ ಎಂದ ಅವರು ಗಂಡು-ಹೆಣ್ಣಿನ ಸಮಾನತೆ, ಜಾತಿ-ಭೇದಗಳ ದಬ್ಬಾಳಿಕೆ, ಬಿಡುವಿಲ್ಲದ ಯಾಂತ್ರಿಕ ಜೀವನದ ದುಷ್ಪರಿಣಾಮವನ್ನು ಚಿತ್ರದಲ್ಲಿ ಸಮಂಜವಾಗಿ ಬಿಂಭಿಸಲಾಗಿದೆ ಎಂದು ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಯಕಿಯಾಗಿ ಯಾನರಾಜ್, ನಾಯಕನಾಗಿ ಶ್ರೀನಗರ ಕಿಟ್ಟಿ, ಇತರೆ ತಾರಾಂಗಣದಲ್ಲಿ ರಮೇಶ್ ಭಟ್, ಶ್ರೀನಿವಾಸ ಪ್ರಭು, ವಿನಯ ಪ್ರಸಾದ್, ಮೂಗೂರು ಸುಂದರಂ, ಪ್ರೊ.ರಾಮೇಶ್ವರಿ ವರ್ಮ, ಬೇಬಿ ಕಶ್ವಿ ಶಶಿಧರ್ ಇತರರು ಪಾತ್ರ ನಿರ್ವಹಿಸಿದ್ದು ಚಿತ್ರವೂ ಅಮೇರಿಕಾ ಸೇರಿದಂತೆ ಮುರುಡೇಶ್ವರ, ಬೆಂಗಳೂರು ಮತ್ತು ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣವಾಗಿದೆ ಎಂದು ತಿಳಿಸಿದರು.
ಚಿತ್ರವೂ ಈಗಾಗಲೇ ಪ್ರಾನ್ಸ್, ಸ್ಪೇನ್, ಪೋಲಾಂಡ್, ಮೆಕ್ಸಿಕೋ, ಯುಎಸ್ ಎ.ಗಾರ್ಡನ್ ಸಿಟಿ ಮತ್ತು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಜಿ.ಮೂರ್ತಿ, ಶಶಿಧರ್ ಸಂಗಾಪುರ, ನಾಯಕಿ ಯಾನರಾಜ್, ಕೃಷ್ಣೇಗೌಡ, ರಾಮಚಂದ್ರ ಹಾಜರಿದ್ದರು. (ವರದಿ : ಕೆ.ಎಂ.ಆರ್)