ದೇಶಪ್ರಮುಖ ಸುದ್ದಿ

ತಲಾಖ್ ಪದ್ಧತಿಯಲ್ಲಿ ಸುಧಾರಣೆ ಅಗತ್ಯವಿದೆ: ವೀರಪ್ಪ ಮೊಯಿಲಿ

ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ತಲಾಖ್ ಹೇಳಿ ವಿವಾಹ ವಿಚ್ಛೇದನ ನೀಡುವ ಪದ್ಧತಿ ಸುಧಾರಣೆ ಕಾಣುವ ಅಗತ್ಯವಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಸಂಸದ ವೀರಪ್ಪ ಮೊಯಿಲಿ ತಿಳಿಸಿದ್ದಾರೆ.

ದೇಶದಲ್ಲಿ ಕೇಂದ್ರ ಕಾನೂನು ಮಂಡಳಿ ತರಲುದ್ದೇಶಿಸಿರುವ ಸುಧಾರಣೆಗಳಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಕುರಿತು ರಾಷ್ಟ್ರೀಯ ಸುದ್ದಿಮಾಧ್ಯಮವೊಂದು ಮೊಯಿಲಿ ಅವರ ಗಮನ ಸೆಳೆದಾಗ ಅವರು ಈ ಪ್ರತಿಕ್ರಿಯೆ ನೀಡಿದ್ದು, “ಯಾವುದೇ ಧರ್ಮದಲ್ಲಿ ರೂಢಿಯಲ್ಲಿರುವ ಆಚರಣೆಗಳು ಕಾಲಕಾಲಕ್ಕೆ ಸುಧಾರಣೆ ಕಾಣಬೇಕಾದ ಅಗತ್ಯವಿದೆ. ಯಾವುದೇ ಧರ್ಮ ಸ್ವಯಂ ಸುಧಾರಣೆಯ ಮಾರ್ಗಸೂಚಿಗಳನ್ನು ಹಾಕಿಕೊಳ್ಳಬೇಕು. ಆಗ ಕಾನೂನಿನ ಜತೆ ಸಂಘರ್ಷವನ್ನು ತಡೆಯಬಹುದು” ಎಂದಿದ್ದಾರೆ.

“ಈ ವಿಷಯದಲ್ಲಿನ ಬೆಳವಣಿಗೆಗಳನ್ನು ಕಾಂಗ್ರೆಸ್ ಪಕ್ಷ ಗಮನಿಸುತ್ತಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಸುಧಾರಣೆಗಳ ದೇಶದಲ್ಲಿ ಚರ್ಚೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಭಾರತದಲ್ಲಿ ಹಿಂದೂ ಎಂಬುದು ಒಂದು ಧರ್ಮವಲ್ಲ ರೂಢಿಗತವಾಗಿರುವ ಜೀವನ ಶೈಲಿ ಎಂದು ಸುಪ್ರೀಂ ಕೋರ್ಟ್‍ ತೀರ್ಪು ನೀಡಿದೆ. ಅದೊಂದು ಹಲವು ಪ್ರಾಚೀನ ಪದ್ಧತಿ, ಆಚರಣೆಗಳನ್ನು ಅನುಸರಿಸುವ ವಿಭಿನ್ನ ಜನಾಂಗಗಳ ಗುಂಪು ಎಂದು ಕರೆಯಬಹುದು. ಹೀಗಿರುವಾಗ ಮುಸ್ಲೀಂ ಧರ್ಮವೂ ಕೂಡ ತನ್ನ ಜೀವನ ಶೈಲಿ ಸುಧಾರಿಸಿಕೊಂಡರೆ ಕಾನೂನಿನ ಜೊತೆ ನಡೆಸಬೇಕಾದ ಸಂಘರ್ಷವನ್ನು ತಾನೇ ನಿಯಂತ್ರಿಸಿಕೊಳ್ಳಬಹುದು ಎನ್ನುವ ಮೂಲಕ ಪರೋಕ್ಷವಾಗಿ ಕೇಂದ್ರದ ಬಿಜೆಪಿ ಸರ್ಕಾರ ತರಲುದ್ದೇಶಿಸಿರುವ ಸುಧಾರಣೆಗಳಿಗೆ ಕಾಂಗ್ರೆಸ್‍ನ ಪೂರ್ಣ ವಿರೋಧವಿಲ್ಲ ಎಂಬುದನ್ನು ತಿಳಿಸಿದ್ದಾರೆ.

Leave a Reply

comments

Related Articles

error: